ಕರ್ನಾಟಕ

karnataka

ETV Bharat / state

ಮುನಿದ ಹೇಮಾವತಿ.. ಜಲ ವಿದ್ಯುತ್ ಕೇಂದ್ರ ಮುಳುಗಡೆ - Trishul Hydro Power Station

ಕೆಆರ್‌ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ, ತ್ರಿಶೂಲ್ ಜಲ ವಿದ್ಯುತ್ ಕೇಂದ್ರ ನದಿ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ.

ಜಲ ವಿದ್ಯುತ್ ಕೇಂದ್ರ ಮುಳುಗಡೆ

By

Published : Aug 10, 2019, 12:15 PM IST

ಮಂಡ್ಯ: ಹೇಮಾವತಿ ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ಜಲ ವಿದ್ಯುತ್ ಕೇಂದ್ರ ಮುಳುಗಡೆಯಾಗಿವೆ. ಕೆಆರ್‌ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ ತ್ರಿಶೂಲ್ ಜಲ ವಿದ್ಯುತ್ ಕೇಂದ್ರ ನದಿ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ.

ಮಣ್ಣು ಮಿಶ್ರಿತ ನದಿಯ ನೀರು ಜಲ ವಿದ್ಯುತ್ ಕೇಂದ್ರಕ್ಕೆ ನುಗ್ಗಿರುವುದರಿಂದ ಟರ್ಬೈನ್‌ಗಳು ಮುಳುಗಿವೆ. ಇದರಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಟರ್ಬೈನ್ ಜೊತೆಗೆ ಹಲವು ಯಂತ್ರಗಳಿಗೂ ನೀರು ನುಗ್ಗಿದೆ. ನೀರು ಹೊರ ಹಾಕಲು ಸಾಧ್ಯವಾಗದೇ ಅಧಿಕಾರಿಗಳು ಮತ್ತು ನೌಕರರು ಕೇಂದ್ರದಿಂದ ಹೊರ ಬಂದಿದ್ದಾರೆ.

ಜಲ ವಿದ್ಯುತ್ ಕೇಂದ್ರ ಮುಳುಗಡೆ..

ಸಮೀಪವೇ ಇದ್ದ ಜಮೀನುಗಳಿಗೂ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ. ಅಪಾಯವಿರುವ ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ಪೊಲೀಸರನ್ನು ನಿಯೋಜನೆ ಮಾಡಿದೆ. ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.

For All Latest Updates

ABOUT THE AUTHOR

...view details