ಮಂಡ್ಯ: ಬಿರು ಬೇಸಿಗೆಯಲ್ಲೂ ನಿಖಿಲ್ ಕುಮಾರಸ್ವಾಮಿ ಅಬ್ಬರದ ಭಾಷಣ ಮಾಡ್ತಾ ಇದ್ರೆ, ಇತ್ತ ವಾಹನ ಸವಾರರು ಬಿಸಿಲಿನಿಂದ ಬಸವಳಿದ ಘಟನೆ ಹಲಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಿತು.
ಹೆದ್ದಾರಿಯಲ್ಲಿ ನಿಖಿಲ್ ಪ್ರಚಾರಕ್ಕೆ ಬಸವಳಿದ ವಾಹನ ಸವಾರರು! - ವಾಹನ ಸವಾರ
ಬೇಸಿಗೆಯ ಬಿರು ಬಿಸಿಲಲ್ಲಿ ನಿಖಿಲ್ ಕುಮಾರಸ್ವಾಮಿ ಅಬ್ಬರದ ಭಾಷಣ ಮಾಡುತ್ತಿದ್ದರೆ, ಇತ್ತ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಹಲಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿತ್ತು.
ಬಸವಳಿದ ವಾಹನ ಸವಾರರು
ಸುಮಾರು ಒಂದೂವರೆ ಗಂಟೆಗಳ ಕಾಲ ನಿಖಿಲ್ ಕುಮಾರಸ್ವಾಮಿ ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಂತು ಭಾಷಣ ಮಾಡಿದರು. ಇತ್ತ ಮಳವಳ್ಳಿ-ಕನಕಪುರ ಮಾರ್ಗ ಓಡಾಡುವ ವಾಹನ ಸವಾರರು ಬಿಸಿಲಿನಲ್ಲೇ ನಿಂತು ಪರಿತಪಿಸಿದರು.
ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಡಾ. ಅನ್ನದಾನಿ ಹಾಗೂ ಮರಿತಿಬ್ಬೇಗೌಡರ ಭಾಷಣ ಮುಗಿಯುವವರೆಗೂ ಸವಾರರು ಪರದಾಡಬೇಕಾಯಿತು. ಜೊತೆಗೆ ಕಾರ್ಯಕರ್ತರು ಬಿಸಲಿನಲ್ಲೇ ನಿಂತು ಭಾಷಣ ಆಲಿಸಿದರು.