ಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ನಾಲ್ಕನೇ ಬಾರಿಗೆ ಕೆಆರ್ಎಸ್ ಡ್ಯಾಂ ಭರ್ತಿಯಾಗಿದೆ. ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ 124.80 ಗರಿಷ್ಠ ಅಡಿ ಇರುವ KRS ಡ್ಯಾಂ ತುಂಬಿದ್ದು, ಜಲಾಶಯದ ಮೂರು ಗೇಟ್ಗಳ ಮೂಲಕ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಬರ್ತಿಯಾದ ಕೆಆರ್ಎಸ್ ಡ್ಯಾಮ್ - ಈಟಿವಿ ಭಾರತ ಕನ್ನಡ
ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಡ್ಯಾಂ ಭರ್ತಿಯಾಗಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಡ್ಯಾಂ ತುಂಬಿದೆ.
![ಮೂರು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಬರ್ತಿಯಾದ ಕೆಆರ್ಎಸ್ ಡ್ಯಾಮ್ Mnd_19_01_k](https://etvbharatimages.akamaized.net/etvbharat/prod-images/768-512-16687763-thumbnail-3x2-vny.jpg)
ಕೆಆರ್ಎಸ್ ಡ್ಯಾಂ
KRS ಡ್ಯಾಂ ನ ಇಂದಿನ ನೀರಿನ ಮಟ್ಟ 124.80ಅಡಿ ಇದ್ದು, ಒಳಹರಿವು: 26,196 ಕ್ಯೂಸೆಕ್ ಇದೆ. ಹೊರ ಹರಿವಿನ ಪ್ರಮಾಣ 25,939 ಕ್ಯೂಸೆಕ್ ಇದೆ. ಪ್ರಸ್ತುತ ನೀರಿನ ಸಂಗ್ರಹ : 49.452 ಟಿ.ಎಂ.ಸಿ.
ಇದನ್ನೂ ಓದಿ:ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ