ಮಂಡ್ಯ: ಜಿಲ್ಲೆಯಲ್ಲಿ ಇಂದು 28 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಎಲ್ಲರನ್ನೂ ಮಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ.
ಮಂಡ್ಯದಲ್ಲಿ 28 ಮಂದಿ ಗುಣಮುಖ: ಮತ್ತೆ 13 ಮಂದಿಗೆ ವಕ್ಕರಿಸಿದ ‘ಮಹಾ’ ಕೊರೊನಾ - ಮತ್ತೆ 13 ಮಂದಿಗೆ ಒಕ್ಕರಿಸಿದ ‘ಮಹಾ’ ಕೊರೊನಾ
ಮಂಡ್ಯ ಜಿಲ್ಲೆಯಲ್ಲಿ ಇಂದು 28 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, 13 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮುಂಬೈನಿಂದ ಬಂದವರೆಂದು ವರದಿಯಾಗಿದೆ.

ಮಂಡ್ಯದಲ್ಲಿ 28 ಮಂದಿ ಗುಣಮುಖ, ಮತ್ತೆ 13 ಮಂದಿಗೆ ಒಕ್ಕರಿಸಿದ ‘ಮಹಾ’ ಕೊರೊನಾ
ಕೆ.ಆರ್ ಪೇಟೆ ತಾಲೂಕಿನ 25 ಮಂದಿ ಹಾಗೂ ನಾಗಮಂಗಲ ತಾಲೂಕಿನ ಮೂವರು ಗುಣಮುಖರಾಗಿದ್ದು, ಇವರೆಲ್ಲಾ ಮುಂಬೈ ಕನ್ನಡಿಗರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೂ 60 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಚಿಕಿತ್ಸೆ ನೀಡುವ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಹಾಗೂ ವೈದ್ಯರು ನೀಡಿರುವ ಗುಣಾತ್ಮಕ ಚಿಕಿತ್ಸೆಯಿಂದಾಗಿ ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಿದ ನಂತರ ಬಿಡುಗಡೆ ಮಾಡಲಾಗಿದೆ.
ಮತ್ತೆ 13 ಪ್ರಕರಣ ದಾಖಲು: ಇಂದು 28 ಮಂದಿ ಗುಣಮುಖರಾಗಿ ಬಿಡುಗಡೆಯಾದರೆ, ಮತ್ತೆ 13 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಎಲ್ಲರೂ ಮುಂಬೈ ಕನ್ನಡಿಗರೇ ಆಗಿದ್ದಾರೆ.