ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ 'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನ - ಈಟಿವಿ ಭಾರತ ಕನ್ನಡ

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನ ಕಂಡಿದ್ದ 'ಟಿಪ್ಪು ನಿಜ ಕನಸುಗಳು' ನಾಟಕದ ಪ್ರದರ್ಶನ ಮಂಡ್ಯದಲ್ಲಿ ನಡೆಯಿತು.

Tippu Nija Kanasugalu
ಟಿಪ್ಪು ನಿಜ ಕನಸುಗಳು

By

Published : Jan 15, 2023, 10:10 AM IST

ಮಂಡ್ಯ:ತೀವ್ರ ವಿವಾದದಿಂದಲೇ ಸುದ್ದಿಯಾಗಿದ್ದ ಅಡ್ಡಂಡ ಕಾರ್ಯಪ್ಪ ಅವರ 'ಟಿಪ್ಪು ನಿಜ ಕನಸುಗಳು' ನಾಟಕದ 25ನೇ ಪ್ರದರ್ಶನವನ್ನು ಅಂಬೇಡ್ಕರ್​ ಭವನದಲ್ಲಿ ಶನಿವಾರ ನಡೆಸಲಾಯಿತು. ಸಚಿವ ಅಶ್ವಥ್​ ನಾರಾಯಣ್​ ನಾಟಕ ಪ್ರದರ್ಶನಕ್ಕೆ ಚಾಲನೆ ಕೊಟ್ಟರು. ಬಳಿಕ ಮಾತನಾಡಿದ ಸಚಿವರು, ನರಹಂತಹ ಟಿಪ್ಪುವಿನ ಜಯಂತಿಯನ್ನು ಕಾಂಗ್ರೆಸ್​ನವರು ಆಚರಿಸುತ್ತಿದ್ದಾರೆ. ದೇಹದ್ರೋಹಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಇತಿಹಾಸವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಅದು ಮರುಕಳಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಈ ನಾಟಕ ನೋಡಿದರೆ ಹಳೆ ಮೈಸೂರು ಭಾಗದಲ್ಲಿ ಟಿಪ್ಪುವಿನ ಆಡಳಿತವಿರುವಾಗ ಜನರು ಅನುಭವಿಸಿದ ಕಷ್ಟ, ಅಮಾಯಕರ ಪ್ರಾಣ ತೆಗೆದದ್ದು, ಜನರನ್ನು ಮತಾಂತರ ಮಾಡಿದ್ದು, ಹೆಣ್ಣು ಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಜನರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದಾರೆ ಅನ್ನೋದು ತಿಳಿಯುತ್ತದೆ. ಇಷ್ಟು ದಿನ ಇವೆಲ್ಲವೂ ಇತಿಹಾಸದಲ್ಲಿ ಅಳಿಸಿ ಹೋಗಿತ್ತು. ಆದರೆ ಇದೀಗ ಅಡ್ಡಂಡ ಕಾರ್ಯಪ್ಪನವರು ನಾಟಕದ ಮೂಲಕ ಸತ್ಯ ಹೊರತಂದಿದ್ದಾರೆ ಎಂದರು.

'ಟಿಪ್ಪು ನಿಜ ಕನಸುಗಳು' ನಾಟಕದ ಮೂಲಕ ಟಿಪ್ಪುವಿನ ನಿಜರೂಪ ಬಯಲು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ನರಹಂತಕ ಟಿಪ್ಪು ಯಾವ ರೀತಿಯಾಗಿ ಅಮಾಯಕರನ್ನು ಕೊಲ್ಲುತ್ತಿದ್ದ ಎಂಬುದಕ್ಕೆ ಐಯ್ಯಂಗರ್​ ಅವರೇ ಸಾಕ್ಷಿ. ಈಗಲೂ ಕಾಂಗ್ರೆಸ್​ ಪಕ್ಷದವರು ಟಿಪ್ಪು ಜಯಂತಿ ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇವರಿಗೆ ಇತಿಹಾಸದಲ್ಲಿ ಬೇರೆ ಯಾರೂ ಸಿಕ್ಕಿಲ್ಲವೇನೋ. ಅದಕ್ಕಾಗಿಯೇ ಸಮಾಜಘಾತುಕರಾಗಿರುವ ಟಿಪ್ಪುವಿನಂತಹ ನರಹಂತಕನ ಆಚರಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:'ಟಿಪ್ಪು ನಿಜ ಕನಸುಗಳು' ಪುಸ್ತಕಕ್ಕೆ ವಿಧಿಸಿದ್ದ ನಿರ್ಬಂಧ ತೆರವು

ಜೈಲಿನಲ್ಲಿದ್ದ ಪಿಎಫ್ಐ, ಎಸ್​ಡಿಪಿಐ ಕಾರ್ಯಕರ್ತರನ್ನು ಕಾಂಗ್ರೆಸ್​ ನಾಯಕರು ಬಿಡುಗಡೆ ಮಾಡಿದರು. ಅವರ ಮೇಲಿನ ಕೇಸ್​ ವಜಾ ಮಾಡಿ ದೇಶದ್ರೋಹಿಗಳ ಪರವಾಗಿ ನಿಂತರು. ಸಮಾಜಕ್ಕೆ ಇತಿಹಾಸದಲ್ಲಿ ಮರೆಮಾಚಿರುವ ಸತ್ಯಾಂಶವನ್ನು ತಿಳಿಸುವ ಕೆಲಸವಾಗಬೇಕು. ಆದರೆ ಸತ್ಯವನ್ನು ಕಾಂಗ್ರೆಸ್​ ಪಕ್ಷ ಸಹಿಸಿಕೊಳ್ಳುವುದಿಲ್ಲ. ನಾಟಕ ಪ್ರದರ್ಶನಕ್ಕೂ ತಡೆ ಒಡ್ಡಿದರು. ಈಗ ಎಲ್ಲಾ ಸತ್ಯ ಹೊರಬರುತ್ತಿದೆ. ಆ ಕೆಲಸವನ್ನು ಅಡ್ಡಂಡ ಕಾರ್ಯಪ್ಪ ಮಾಡಿದ್ದಾರೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಈ ನಾಟಕ ನೋಡುತ್ತಿದ್ದಾರೆ. ನಾನು ಕೂಡ ನೋಡಿದೆ. ಚಿಕ್ಕವನಿರುವಾಗ ನಾನು ಕೂಡ ಟಿಪ್ಪುವನ್ನು ಹೀರೋ ಅಂದುಕೊಂಡುಬಿಟ್ಟಿದ್ದೆ ಎಂದರು.

ಟಿಪ್ಪು ನಿಜ ಕನಸುಗಳು ನಾಟಕ:ಈ ನಾಟಕ ಮಂಡ್ಯದಲ್ಲಿ ಪ್ರದರ್ಶನವಾಗುತ್ತಿರುವುದಕ್ಕೆ ಮಹತ್ವವಿದೆ ಎಂದು ಈ ಮೊದಲು ಅಡ್ಡಂಡ ಕಾರ್ಯಪ್ಪ ಹೇಳಿದ್ದರು. ಇದೇ ಮಣ್ಣಿನ ಮಕ್ಕಳಾದ ಉರಿಗೌಡ ಮತ್ತು ದೊಡ್ಡನಂಜೇಗೌಡರು ಕೃಷಿಕರು ಹಾಗು ಪಾರ್ಟ್​ ಟೈಮ್ ಯೋಧರು. ಬಿಡುವಿನ ವೇಳೆಯಲ್ಲಿ ಯುದ್ಧಕ್ಕೆ ಕರೆದರೆ ಹೋಗುವಂತಹ ನಾಯಕರು. ಅವರು ಟಿಪ್ಪುವನ್ನು 1799 ಮೇ 4ರಂದು ಆತನ ಕೋಟೆಗೆ ನುಗ್ಗಿ ಆತನನ್ನು ಅಟ್ಟಾಡಿಸಿ ಕೊಲ್ಲುತ್ತಾರೆ. ಶ್ರೀರಂಗಪಟ್ಟಣದ ವಾಟರ್​ಗೇಟ್ ದ್ವಾರದೊಳಗೆ ಈ ಘಟನೆ ನಡೆಯುತ್ತದೆ.

ಅಲ್ಲದೇ ಟಿಪ್ಪು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟೀಷರಿಂದ ಹತನಾದ ಎಂಬ ಸುಳ್ಳು ಚರಿತ್ರೆ ಪ್ರಚಲಿತದಲ್ಲಿದೆ. ಆದರೆ, ಅನೇಕ ದಾಖಲೆಗಳಿಂದ ಈ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ. ಬ್ರಿಟೀಷರು ಕೋಟೆ ಬಾಗಿಲನ್ನು ಒಡೆದು ಒಳನುಗ್ಗುವ ಮೊದಲೇ ಟಿಪ್ಪು ಹತನಾಗಿದ್ದ ಎಂದು ಅವರು ಕಥೆಯನ್ನು ಕಾರ್ಯಪ್ಪ ವಿವರಿಸಿದ್ದರು.

ಇದನ್ನೂ ಓದಿ:'ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಗೊಳ್ಳಲಿದೆ': ಅಡ್ಡಂಡ ಕಾರ್ಯಪ್ಪ ಸ್ಪಷ್ಟನೆ

ABOUT THE AUTHOR

...view details