ಮಂಡ್ಯ:ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಮಣ್ಣು ಸುರಿಯುತ್ತಿದ್ದ ಟಿಪ್ಪರ್ಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಟಿಪ್ಪರ್ ಚಾಲಕ ಮೃತಪಟ್ಟ ಘಟನೆ ಕೆ.ಆರ್.ಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನಲ್ಲಿ ನಡೆದಿದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಕಾಂತಪ್ಪ(35) ಮೃತಪಟ್ಟವರು.
ಕೆರೆಯ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಅಗತ್ಯವಾದ ಮಣ್ಣನ್ನು, ಟಿಪ್ಪರ್ನಿಂದ ತಂದು ಕೆಳಗೆ ಸುರಿಯುವುದಕ್ಕಾಗಿ ಚಾಲಕ್ ಟಿಪ್ಪರ್ನ ಲಿಫ್ಟ್ನ್ನು ಎತ್ತಿದ್ದಾನೆ. ಈ ಸಂದರ್ಭದಲ್ಲಿ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಚಾಲಕ ಗಮನಿಸದೇ, ಲಿಫ್ಟ್ ಎತ್ತಿದ ಪರಿಣಾಮ ಟಿಪ್ಪರ್ಗೆ ವಿದ್ಯುತ್ ಪ್ರವಹಿಸಿದೆ.