ಮಂಡ್ಯ: ಒಡೆದಿರುವ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡೋದೊಂದೇ ಬಾಕಿ ಎಂದು ದಳಪತಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ಟಕ್ಕರ್ ನೀಡಿದ್ದಾರೆ. ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಸಂಸದೆ ಸುಮಲತಾ ಅಲರ್ಟ್ ಆಗಿದ್ದಾರೆ. ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಬೇಕೆಂದು ಪಣ ತೊಟ್ಟಿದ್ದು, ಈಗಾಗಲೇ ಮಂಡ್ಯದಲ್ಲಿ ಜೆಡಿಎಸ್ ಮಣ್ಣು ಮುಕ್ಕಿಸಲು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದೆ ಸುಮಲತಾ ಸೂಚನೆ ನೀಡಿದ್ದಾರೆ.
ಮದ್ದೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿಂದು ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲೇ ಜೆಡಿಎಸ್ ಭದ್ರಕೋಟೆಯ ಗೋಡೆ ಒಡೆದೋಗಿದೆ. ಕೆ.ಆರ್. ಪೇಟೆ ಬೈ ಎಲೆಕ್ಸನ್ ನಲ್ಲೂ ಜೆಡಿಎಸ್ನವರು ಸೋತಿದ್ದಾರೆ. ಈಗ ಮತ್ತೆ ಈ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಟೈಮ್ ಬಂದಿದೆ. ಆದ್ರೆ ನಾವೆಲ್ಲರೂ ಮನಸ್ಸು ಮಾಡಬೇಕು ಅಷ್ಟೇ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು- ಸುಮಲತಾ.. ಎಲ್ಲರೂ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡಿದ್ರೆ ಖಂಡಿತ ಜಯ ಸಿಗುತ್ತೆ. ಇದನ್ನು ನಾನು ನನ್ನ ಚುನಾವಣೆಯಲ್ಲಿ ಕಲಿತಿದ್ದೇನೆ. ನನ್ನ ಆಸೆ ಏನು ಅಂದ್ರೆ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಏನು ಅಂತ ತೋರಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ಮುಖ್ಯವಾಗಿ ನಮ್ಮ ಸ್ವಂತ ಊರು ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು. ಆ ಶಕ್ತಿ ನಮ್ಮಲ್ಲಿದೆ ಎಂದು ತಿಳಿಸಿದರು.
ಬಿಜೆಪಿ ಗೆಲ್ಲಿಸುವ ಆ ಶಕ್ತಿ ನಮ್ಮಲ್ಲಿದೆ. ಆ ಶಕ್ತಿ ನೋಡಿ ಸ್ಪೂರ್ತಿ ತಗೊಳ್ಳಬೇಕು. ಆ ಅವಕಾಶವನ್ನು ನಾವು ಮಿಸ್ ಮಾಡ್ಕೊಳ್ಳಬಾರದು.ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಆ ನಿಟ್ಟಿನಲ್ಲಿ ಪ್ರಾಮಾಣಿಕದಿಂದ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ಬಿಟ್ಟುಕೊಟ್ಟರೆ ನಮ್ಮದು ತಪ್ಪು ಹಾಗುತ್ತೆ. ಅದರಲ್ಲೂ ನನ್ನ ಸ್ವಂತ ಊರು ಮದ್ದೂರಿನಲ್ಲಿ ಬಿಜೆಪಿ ಬಾವುಟ ಆರಿಸುವುದೊಂದೆ ನನ್ನ ಆಸೆ ಎಂದು ಹೇಳುವ ಮೂಲಕ ಶಾಸಕ ಡಿ ಸಿ ತಮ್ಮಣ್ಣಗೆ ಟಾಂಗ್ ಕೊಟ್ಟಿದ್ದಾರೆ.