ಮಂಡ್ಯ: ಪಾಂಡವಪುರ ತಾಲ್ಲೂಕಿನ ನೀಲನಹಳ್ಳಿ ಗೇಟ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಎತ್ತಿನಗಾಡಿಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂರು ಎತ್ತುಗಳು ಮೃತಪಟ್ಟಿದ್ದು, ಒಂದು ಎತ್ತಿನ ಸ್ಥಿತಿ ಚಿಂತಾಜನಕವಾಗಿದೆ. ಮೂರು ಮಂದಿ ರೈತರಿಗೆ ಪೆಟ್ಟು ಬಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಲಾರಿ ಡಿಕ್ಕಿ ಹೊಡೆದು ಮೂರು ಎತ್ತುಗಳು ಸಾವು.. ಒಂದು ಎತ್ತಿನ ಸ್ಥಿತಿ ಗಂಭೀರ - ಎತ್ತಿನಗಾಡಿಗೆ ಮಿನಿ ಲಾರಿ ಡಿಕ್ಕಿ
ಎತ್ತಿನಗಾಡಿಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂರು ಎತ್ತುಗಳು ಮೃತಪಟ್ಟಿದ್ದು, ಒಂದು ಎತ್ತಿನ ಸ್ಥಿತಿ ಚಿಂತಾಜನಕವಾಗಿದೆ. ಮೂರು ಮಂದಿ ರೈತರಿಗೆ ಪೆಟ್ಟಾಗಿದೆ.
ಅಪಘಾತವಾದ ಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು, ಬಿಜೆಪಿ ಯುವ ನಾಯಕ ಡಾಕ್ಟರ್ ಎನ್.ಎಸ್.ಇಂದ್ರೇಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರೈತಸಂಘದ ಪಾಂಡವಪುರ ಅಧ್ಯಕ್ಷ ಚಿಕ್ಕಾಡೆ ಹರೀಶ್ ಭೇಟಿ ನೀಡಿ, ಎತ್ತುಗಳ ಸಾವಿಗೆ ಬೇಸರ ವ್ಯಕ್ತಪಡಿಸಿದರು. ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹಾರ ನೀಡುವ ಕುರಿತು ಸೂಚಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಾ.ಇಂದ್ರೇಶ್ ಅವರು, ನೊಂದ ರೈತ ಕುಟುಂಬಕ್ಕೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡಿದರು.
ಇದನ್ನೂ ಓದಿ :25 ವರ್ಷದಿಂದ ಹಾವಿನ ದಾಳಿಗೆ ಒಳಗಾದ ಕುಟುಂಬ.. ಹಾವು ಕಚ್ಚಿದ 11 ಮಂದಿಯಲ್ಲಿ ಐವರು ಸಾವು