ಕರ್ನಾಟಕ

karnataka

ETV Bharat / state

ಸಕ್ಕರೆನಾಡಲ್ಲಿ ಮೂವರು ಗುಣಮುಖ: ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ - Three of Covid-19

ತಬ್ಲಿಘಿಗಳ ಸಂಪರ್ಕದಿಂದ ಕೊರೊನಾ ಸೋಂಕಿತರಾಗಿ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಳವಳ್ಳಿಯ ಮೂವರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Three of Covid-19
ಗುಣಮುಖರಾದ ಮೂವರು: ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ

By

Published : May 3, 2020, 8:19 PM IST

ಮಂಡ್ಯ: ಕೋವಿಡ್-19 ಸೋಂಕಿತರಲ್ಲಿ ಇಂದು ಮೂವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ತಬ್ಲಿಘಿಗಳ ಸಂಪರ್ಕದಿಂದ ಕೊರೊನಾ ಸೋಂಕಿತರಾಗಿ ಇವರು ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲೆಯಲ್ಲಿ ಇದುವರೆಗೆ ಏಳು ಮಂದಿ ಗುಣಮುಖರಾಗಿದ್ದಾರೆ. ಸದ್ಯ 19 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 26 ಮಂದಿ‌ ಕೊರೊನಾ ಸೋಂಕಿತರು ಇದ್ದರು.

For All Latest Updates

ABOUT THE AUTHOR

...view details