ಮಂಡ್ಯ: ಕಾರು ಮತ್ತು ಆಟೋ ನಡುವೆ ಕಳೆದ ರಾತ್ರಿ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆ ಮಳವಳ್ಳಿಯ ಕಣಿಗಲ್ ಗೇಟ್ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದವರು ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮೃತರನ್ನು ಬೆಂಗಳೂರು ಮೂಲದ ರವಿಕುಮಾರ್ (50), ಭಾಸ್ಕರ (48), ಮದ್ದೂರಿನ ಶ್ರೀನಿವಾಸ್ (35) ಎಂದು ಗುರುತಿಸಲಾಗಿದೆ. ರವಿಕುಮಾರ್ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದು, ಹುಟ್ಟೂರಿಗೆ ಭೇಟಿ ನೀಡಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದರು.