ಕರ್ನಾಟಕ

karnataka

ETV Bharat / state

ನಿಮಿಷಾಂಭ ಸನ್ನಿಧಿಯಲ್ಲಿ ಮಾಘ ಮಾಸದ ಹುಣ್ಣಿಮೆ ಸಂಭ್ರಮ: ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ - Nimishamba temple

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿಮಿಷಾಂಭ ಸನ್ನಿಧಿಯಲ್ಲಿ ಮಾಘ ಮಾಸದ ಹುಣ್ಣಿಮೆ ಸಂಭ್ರಮ ಕಳೆಗಟ್ಟಿದೆ. ರಾಜ್ಯದ ವಿವಿಧೆಡೆಯಿಂದ ಹುಣ್ಣಿಮೆಯ ಮಾಘ ಸ್ನಾನಕ್ಕೆ ಸಾವಿರಾರು ಭಕ್ತರು ಮಧ್ಯರಾತ್ರಿ ವಾಹನಗಳಲ್ಲಿ ಆಗಮಿಸಿದ್ದಾರೆ.

Mandya
ನಿಮಿಷಾಂಭ ಸನ್ನಿಧಿಯಲ್ಲಿ ಮಾಘ ಮಾಸದ ಹುಣ್ಣಿಮೆ ಸಂಭ್ರಮ: ಹರಿದು ಬಂದ ಭಕ್ತ ಸಾಗರ

By

Published : Feb 27, 2021, 1:30 PM IST

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್ ನಿಮಿಷಾಂಭ ಸನ್ನಿಧಿಯಲ್ಲಿ ಮಾಘ ಮಾಸದ ಹುಣ್ಣಿಮೆ ಹಿನ್ನೆಲೆ ಭಕ್ತ ಸಾಗರವೇ ಹರಿದು ಬಂದಿದೆ.

ನಿಮಿಷಾಂಭ ಸನ್ನಿಧಿಯಲ್ಲಿ ಮಾಘ ಮಾಸದ ಹುಣ್ಣಿಮೆ ಸಂಭ್ರಮ: ಹರಿದು ಬಂದ ಭಕ್ತ ಸಾಗರ

ರಾಜ್ಯದ ವಿವಿಧೆಡೆಯಿಂದ ಹುಣ್ಣಿಮೆಯ ಮಾಘ ಸ್ನಾನಕ್ಕೆ ಸಾವಿರಾರು ಭಕ್ತರು ಮಧ್ಯರಾತ್ರಿಯೇ ವಾಹನಗಳಲ್ಲಿ ಆಗಮಿಸಿದ್ದಾರೆ. ಕಾವೇರಿ ನದಿಯಲ್ಲಿ ಮಿಂದು ಗಂಗಾ ಪೂಜೆ ನೆರವೇರಿಸಿದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ನಿಮಿಷಾಂಭ ದೇವಿ ದರ್ಶನ ಪಡೆದರು.

ಹುಣ್ಣಿಮೆಯ ಮಾಘ ಸ್ನಾನ ಮಾಡಿ ದೇವಿಯ ದರ್ಶನ ಪಡೆದರೆ ಒಳಿತಾಗಲಿದೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಶ್ರಿ ನಿಮಿಷಾಂಭ ದೇವಿ ಸನ್ನಿಧಿಗೆ ಭಕ್ತ ಸಮೂಹ ಹರಿದು ಬಂದಿದೆ. ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನದಿಂದ ದೇವಸ್ಥಾನದ ಅವರಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾಘ ಮಾಸದ ಸ್ನಾನಕ್ಕೆ ಬಂದ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಣೆ ಮಾಡಿದ್ದಾರೆ.

ABOUT THE AUTHOR

...view details