ಮಂಡ್ಯ:ಗಂಧದ ಮರ ಕದ್ದು ಸಾಗಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ.
ಗಂಧದ ಮರ ಕದ್ದು ಸಾಗಿಸಲು ಯತ್ನ, ಕಳ್ಳರು ಅರೆಸ್ಟ್ - illegal Shipment of sandalwood
ಗಂಧದ ಮರದ ತುಂಡುಗಳನ್ನು ಕದ್ದು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಂಧದ ಮರ ಕದ್ದು ಸಾಗಿಸಲು ಪ್ರಯತ್ನಿಸುತ್ತಿದ್ದ ಕಳ್ಳರು ಪೊಲೀಸರ ವಶ
ಕಿರಗಂದೂರು ಗ್ರಾಮದ ಸುರೇಶ್ ಮತ್ತು ಸುಂದರ್ ಸಿಕ್ಕಿಬಿದ್ದ ಆರೋಪಿಗಳಾಗಿದ್ದು, ಇವರನ್ನು ಮಾಲು ಸಮೇತ ಹಿಡಿದು ಕಾವೇರಿ ನಗರದ ನಿವಾಸಿಗಳು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ನಗರದ ಹೊರ ವಲಯದಲ್ಲಿ ಗಂಧದ ಮರ ಕಡಿಯುತ್ತಿದ್ದಾಗ ಸಿಕ್ಕಿಬಿದ್ದ ಕಳ್ಳರನ್ನು ಮೊದಲು ಜನರು ಹಿಡಿದು ಕಟ್ಟಿ ಹಾಕಿದ್ದಾರೆ. ನಂತರ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.