ಮಂಡ್ಯ: ವಾರದ ಹಿಂದೆ ಕಳ್ಳತನವಾಗಿದ್ದ ಸಾಕಷ್ಟು ಬೆಲೆ ಬಾಳುವ ಎರಡು ಹೋರಿಗಳನ್ನು ಕಳ್ಳರು ಮರಳಿ ಮಾಲೀಕನ ಜಮೀನಿನ ಬಳಿ ತಂದು ಬಿಟ್ಟಿರುವ ಆಪರೂಪದ ಘಟನೆ ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿಯಲ್ಲಿ ನಡೆದಿದೆ.
ಒಂದು ವಾರದ ಹಿಂದೆ ಕುಂದನಹಳ್ಳಿ ಗ್ರಾಮದ ಕೃಷ್ಣಯ್ಯ ಎಂಬುವರಿಗೆ ಸೇರಿದೆ 1.25 ಲಕ್ಷ ರೂ. ಬೆಲೆ ಬಾಳುವ ಹೋರಿಗಳ ಕಳ್ಳತನವಾಗಿತ್ತು. ತೋಟದಲ್ಲಿದ್ದ ಹೋರಿಗಳನ್ನು ಕದ್ದೊಯ್ಯಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕದ್ದ ಬೆಲೆ ಬಾಳುವ ಹೋರಿಗಳನ್ನು ಮಾಲೀಕನ ಜಮೀನು ಹತ್ತಿರ ಬಿಟ್ಟು ಹೋದ ಕಳ್ಳರು ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿತ್ತು. ತನಿಖೆಯ ವಿಷಯ ತಿಳಿದ ಖದೀಮರು ಹೆದರಿ ಮೊನ್ನೆ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಕೃಷ್ಣಯ್ಯ ಅವರ ಜಮೀನಿನ ಸ್ವಲ್ಪ ದೂರದಲ್ಲಿ ಹೋರಿಗಳನ್ನು ತಂದು ಬಿಟ್ಟಿದ್ದಾರೆ. ಎಂದಿನಂತೆ ಬೆಳಗ್ಗೆ ಕೃಷ್ಣಯ್ಯ ವಾಯು ವಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಹೋರಿಗಳು ಇರುವುದನ್ನು ಗಮನಿಸಿದ್ದಾರೆ. ತುಂಬಾ ಸಂತೊಷದಿಂದ ಅವುಗಳನ್ನು ತಮ್ಮ ಜಮೀನಿಗೆ ಕರೆತಂದಿದ್ದಾರೆ.
ಹೋರಿಗಳ ಮೈ ಮೇಲೆ ಗಾಯದ ಗುರುತುಗಳಾಗಿದ್ದು, ಮೂಗಿನ ಹೊಳ್ಳೆಯಲ್ಲಿನ ಗಾಯಕ್ಕೆ ಹುಳುಗಳು ಬಿದ್ದಿರುವುದು ಕಂಡುಬಂದಿದೆ. ಸದ್ಯ ಕೃಷ್ಣಯ್ಯ ಹೋರಿಗಳು ಸಿಕ್ಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.