ಮಂಡ್ಯ: ಮಹಿಳೆಯರ ಕತ್ತಿನಿಂದ ಸರ ಕಸಿದು ಪರಾರಿಯಾಗ್ತಿದ್ದ ತಂಡವನ್ನು ಜಿಲ್ಲೆಯ ಕೆ.ಎಂ.ದೊಡ್ಡಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಐದು ಮಂದಿ ಸರಗಳ್ಳರ ಗ್ಯಾಂಗ್, ಕಳವು ಮಾಡಿದ್ದ ಸರಗಳನ್ನು ಮಾರಾಟ ಮಾಡಿ ಬಂದಿದ್ದ 3.55 ಲಕ್ಷ ರೂ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಎಂ. ಅಶ್ವಿನಿ ತಿಳಿಸಿದರು. ಬಂಧಿತ ಸರಗಳ್ಳರು ವಿವಿಧೆಡೆ ಹಲವು ಪ್ರಕರಣಗಳಲ್ಲಿ 250 ಗ್ರಾಂ ಚಿನ್ನದ ಸರಗಳನ್ನು ಕದ್ದು ಮಾರಾಟ ಮಾಡುವ ವೇಳೆ ಸಿಕ್ಕಿಹಾಕಿಕೊಂಡಿದ್ದು. ಬಂಧಿತರ ವಿಚಾರಣೆ ವೇಳೆ ಜಿಲ್ಲೆಯಲ್ಲಿ ನಡೆದ 14 ಪ್ರಕರಣದಲ್ಲಿ ಭಾಗಿಯಾಗಿರೋ ಬಗ್ಗೆ ತಿಳಿಸಿದ್ದಾರೆ ಎಂದರು.
ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್ ಸೇರಿ ಒಟ್ಟು 13 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸರ ಕಾರ್ಯಾಕ್ಕೆ ಎಸ್ಪಿ ಅಶ್ವಿನಿ ಪ್ರಶಂಸೆ ವ್ಯಕ್ತಪಡಿಸಿ ವಿಶೇಷ ಬಹುಮಾನ ನೀಡುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಹೆಚ್ಚಾದ ಸರಗಳ್ಳತನ ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಬಂಧಿಸುವುದಾಗಿ ತಿಳಿಸಿದ ಅವರು, ಸಾರ್ವಜನಿಕರು ಯಾವುದೇ ರೀತಿಯ ತೊಂದರೆ, ಆದಲ್ಲಿ ಹಾಗೂ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಆರಕ್ಷಕ ಠಾಣೆಗಳಿಗೆ ತಿಳಿಸುವಂತೆ ಮನವಿ ಮಾಡಿದರು.