ಕರ್ನಾಟಕ

karnataka

ETV Bharat / state

ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು ₹4.5 ಲಕ್ಷ ಎಗರಿಸಿ ಕಳ್ಳರು ಪರಾರಿ - etv bharat kannada

ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ನಾಲ್ಕೂವರೆ ಲಕ್ಷ ರೂ. ಹಣ ದೋಚಿ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.

Etv Bharatthiefs-stolen-more-then-4-lakh-rupee-from-a-parked-car-in-mandya
ಮಂಡ್ಯ: ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು ₹4.5 ಲಕ್ಷ ಎಗರಿಸಿ ಕಳ್ಳರು ಪರಾರಿ

By ETV Bharat Karnataka Team

Published : Nov 6, 2023, 8:32 PM IST

Updated : Nov 6, 2023, 8:45 PM IST

ಕಾರಿನ ಗ್ಲಾಸ್ ಒಡೆದು ₹4.5 ಲಕ್ಷ ಎಗರಿಸಿ ಪರಾರಿಯಾದ ಕಳ್ಳರು

ಮಂಡ್ಯ: ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ‌. ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡವರು. ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ ಎಸ್​ಬಿಐ ಬ್ಯಾಂಕ್​ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನು ಗಮನಿಸಿದ ಖತರ್ನಾಕ್ ಕಳ್ಳರು ಕಾರಿನ ಗಾಜು ಒಡೆದು ಹಣ ದೋಚಿದ್ದಾರೆ.

ಪರಮೇಶ್ ರಿಜಿಸ್ಟರ್ ಕಚೇರಿಯಲ್ಲಿ ಜಮೀನು ರಿಜಿಸ್ಟರ್ ಮಾಡಿಸಿ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಾರಿನಲ್ಲಿದ್ದ ಹಣವನ್ನು ಕಳ್ಳರು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

ಹಣ ಕಳೆದುಕೊಂಡ ಪರಮೇಶ್ ಮಾತನಾಡಿ, "ನಾನು ಕಾರು ನಿಲ್ಲಿಸಿ ಸ್ವಲ್ಪ ಕೆಲಸ ಇದೆ ಎಂದು ಬ್ಯಾಂಕ್​ಗೆ ಹೋಗಿದ್ದೆ. ಬ್ಯಾಂಕ್​ನಿಂದ ಹಿಂತಿರುಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ನಾಲ್ಕೂವರೆ ಲಕ್ಷ ಹಣ ಕಳವಾಗಿದೆ. ಇದು ಜಮೀನು ಮಾರಿದ ಹಣ, ಬ್ಯಾಂಕಿನವರು ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಕಳ್ಳರು ಕಾರಿನ ಗಾಜು ಒಡೆದು ಈ ಕೃತ್ಯ ಎಸಗಿದ್ದಾರೆ" ಎಂದರು.

ಇದನ್ನೂ ಓದಿ:ಕೋಲಾರ: ಎಟಿಎಂ ಕಾರ್ಡ್​ ಬಳಸಿ ವಂಚಿಸುತ್ತಿದ್ದ ಮೂವರ ಬಂಧನ

ಈ ಹಿಂದಿನ ಘಟನೆಗಳು: ಇತ್ತೀಚಿಗೆ, ಕಾರಿನ ಗ್ಲಾಸ್ ಒಡೆದು ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದ ಘಟನೆ ಬೆಂಗಳೂರಿನ ಆನೇಕಲ್​ ತಾಲೂಕಿನ ಸೂರ್ಯಸಿಟಿ ಸಮೀಪದ ಆಸ್ಪತ್ರೆ ಮುಂಭಾಗ ನಡೆದಿತ್ತು. ಅಶ್ವಿನ್ ರೆಡ್ಡಿ ಎಂಬುವವರು ಸ್ವಿಫ್ಟ್ ಕಾರನ್ನ ಆಸ್ಪತ್ರೆಯ ಮುಂಭಾಗ ನಿಲ್ಲಿಸಿದ್ದರು. ಈ ವೇಳೆ, ಹೊಂಚು ಹಾಕಿದ್ದ ಖತರ್ನಾಕ್ ಕಳ್ಳರು ಕಾರಿನ ಗ್ಲಾಸ್ ಒಡೆದು 27,500 ರೂ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದರು. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನು ಈ‌ ಸಂಬಂಧ ಹಣ ಕಳೆದುಕೊಂಡ ಕಾರು ಮಾಲೀಕ ಸಿಸಿಟಿವಿ‌ ದೃಶ್ಯದ ಸಮೇತ ಸೂರ್ಯನಗರ ಪೊಲೀಸ್​ ಠಾಣೆಯಲ್ಲಿ ಬಂದು ದೂರು ದಾಖಲಿಸಿದ್ದರು.

ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ: ಮತ್ತೊಂದೆಡೆ, ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, 6 ಲಕ್ಷ ಹಣವಿದ್ದ ಬ್ಯಾಗ್ ದೋಚಿ ಖದೀಮ ಪರಾರಿಯಾಗಿದ್ದ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿತ್ತು. ಹೆಬ್ಬಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಬಿಲ್ ಕಲೆಕ್ಟರ್ ಆಗಿರುವ ಕೆ.ತುಳಸಿದಾಸ್ ಎಂಬುವವರ ಬಳಿ ಹಣವಿದ್ದ ಬ್ಯಾಗ್ ​ಅನ್ನು ಖದೀಮ ಬ್ಯಾಂಕಿನ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದ.

Last Updated : Nov 6, 2023, 8:45 PM IST

ABOUT THE AUTHOR

...view details