ಮಂಡ್ಯ:ದೇವಾಲಯದ ಬೀಗ ಮುರಿದು ಚಿನ್ನ,ಬೆಳ್ಳಿಯ ಆಭರಣ ದೋಚಿರುವುದಲ್ಲದೆ, ದೇವಿಯ ವಿಗ್ರಹವನ್ನು ಕಿತ್ತು ವಿರೂಪಗೊಳಿಸಿರುವ ಘಟನೆ ನಾಗಮಂಗಲ ಪಟ್ಟಣದ ತೊಳಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮಂಡ್ಯದಲ್ಲಿ ದೇವಾಲಯ ಪ್ರವೇಶಿಸಿ ವಿಗ್ರಹ ವಿರೂಪಗೊಳಿಸಿದ ಕಳ್ಳರು - ದೇವಿಯ ವಿಗ್ರಹ
ಹುಚ್ಚಮ್ಮ ದೇವಿ ದೇವಾಲಯದಲ್ಲಿ ಖದೀಮರು ವಿಕೃತಿ ಮೆರೆದಿದ್ದು, ಚಿನ್ನ-ಬೆಳ್ಳಿಯ ಆಭರಣ ದೋಚಿರುವುದಲ್ಲದೆ, ದೇವಿಯ ವಿಗ್ರಹವನ್ನು ವಿರೂಪಗೊಳಿಸಿದ್ದಾರೆ.
ದೇವಾಲಯಕ್ಕೆ ಕನ್ನ ಹಾಕಿ ವಿಗ್ರಹ ವಿರೂಪಗೊಳಿಸಿದ ಕಳ್ಳರು
ಹುಚ್ಚಮ್ಮ ದೇವಿಯ ಪುಟ್ಟ ದೇವಾಲಯದ ಮೇಲೆ ಕಳ್ಳರು ವಕ್ರದೃಷ್ಟಿ ಬೀರದ್ದು, ಚಿನ್ನದ ತಾಳಿ, ಮುಖಸಿರಿ ಹಾಗೂ ಅಭಯ ಹಸ್ತಗಳು ಸೇರಿದಂತೆ ಮತ್ತಿತರ ಆಭರಣಗಳನ್ನು ಕದ್ದು ಕೊಂಡೊಯ್ದಿದ್ದಾರೆ. ಜೊತೆಗೆ ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ಅಮ್ಮನವರ ವಿಗ್ರಹವನ್ನು ಕಿತ್ತುಹಾಕಿದ್ದಾರೆ.
ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.