ಕರ್ನಾಟಕ

karnataka

ETV Bharat / state

ಮಂಡ್ಯ: ರಾತ್ರಿ ಅಂಗನವಾಡಿಗೆ ನುಗ್ಗಿದ ಕಳ್ಳ.. ಅಡುಗೆ ಮಾಡಿ ತಿಂದು ಕಥೆ, ಕವನ ಬರೆದಿಟ್ಟು ಹೋದ! - ಅಂಗನವಾಡಿಯಲ್ಲಿದ್ದ ಪುಸ್ತಕದಲ್ಲಿ ಕಥೆ, ಕವನ ಬರೆದಿಟ್ಟು ತೆರಳಿರುವ ಕಳ್ಳ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಅಂಗನವಾಡಿಗೆ ಕಳ್ಳತನ ಮಾಡಲೆಂದು ಬಂದಿದ್ದ ಖದೀಮನೋರ್ವ ಬೆಳಗ್ಗೆವರೆಗೂ ಅಲ್ಲೇ ಇದ್ದು, ಅಡುಗೆ ತಯಾರಿಸಿಕೊಂಡು ಊಟ ಮಾಡಿದ್ದಾನೆ. ಬಳಿಕ ತನ್ನ ಜೀವನಾನುಭವವನ್ನು ಕಥೆ ಹಾಗೂ ಕವನ ರೂಪದಲ್ಲಿ ಬರೆದಿಟ್ಟು ಪರಾರಿಯಾಗಿದ್ದಾನೆ.

Theft in madya district malavalli anganavadi
ಮಂಡ್ಯದ ಮಳವಳ್ಳಿಯ ಅಂಗನವಾಡಿಯಲ್ಲಿ ಕಳ್ಳತನ

By

Published : Feb 23, 2022, 7:39 PM IST

Updated : Feb 23, 2022, 7:56 PM IST

ಮಂಡ್ಯ:ಸಕ್ಕರೆ ನಾಡಿನಲ್ಲೊಂದು ವಿಚಿತ್ರ ಎಂಬಂತಹ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲೆಂದೇ ರಾತ್ರೋರಾತ್ರಿ ಅಂಗನವಾಡಿಗೆ ನುಗ್ಗಿದ್ದ ಖದೀಮನೋರ್ವ ಆ ಸ್ಥಳದಲ್ಲಿ ಸಾಹಿತಿಯಾಗಿದ್ದಾನೆ. ಬೆಲೆ ಬಾಳುವ ವಸ್ತುಗಳು ಸಿಗಬಹುದೆಂದು ಮೂಲೆ ಮೂಲೆ ಜಾಲಾಡಿದ್ದ ಆತನಿಗೆ ಕೊನೆಗೆ ಏನು ಸಿಗದಿದ್ದಾಗ ಅಡುಗೆ ತಯಾರಿಸಿ ಊಟ ಮಾಡಿದ್ದಾನೆ. ಬಳಿಕ ಕಥೆ, ಕವನ ಬರೆದಿಟ್ಟು ಪರಾರಿಯಾಗಿದ್ದಾನೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.

ಕಳ್ಳ ಬರೆದಿಟ್ಟ ಕಥ, ಕವನ

ಖದೀಮನೊಬ್ಬ ಅಂಗನವಾಡಿಯ ಬೀಗ ಮುರಿದು ಒಳಗೆ ನುಗ್ಗಿದ್ದನು. ಬೆಲೆ ಬಾಳುವ ವಸ್ತುಗಳು ಏನಾದರೂ ಸಿಗತ್ತವೆ ಅಂದುಕೊಂಡಿದ್ದ ಆತನ ನಿರೀಕ್ಷೆ ಹುಸಿಯಾಗಿತ್ತು. ಅಲ್ಲಿದ್ದ ಬಿರುವಾ ಮತ್ತು ದಿನಸಿ ದಾಸ್ತಾನು ರೂಮಿನ ಬೀಗ ಮುರಿದು ಜಾಲಾಡಿದರೂ ಆತನಿಗೆ ಏನೂ ಸಿಕ್ಕಿಲ್ಲ.

ಅಂಗನವಾಡಿಗೆ ನುಗ್ಗಿ ಊಟ ಮಾಡಿ ಕಥ, ಕವನ ಬರೆದಿಟ್ಟ ಖದೀಮ

ಕೊನೆಗೆ ಅಲ್ಲಿದ್ದ ಸಾಮಾಗ್ರಿಗಳಿಂದ ಗ್ಯಾಸ್​ನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾನೆ. ಬಳಿಕ ನೋಟ್​ ಪುಸ್ತಕದಲ್ಲಿ ಎರಡು ಪುಟಗಳಲ್ಲಿ ಜೀವನದಲ್ಲಿ ತನಗಾಗಿರುವ ಅನುಭವಗಳನ್ನು ಕವನ, ಕಥೆ ರೂಪದಲ್ಲಿ ಬರೆದು ಜಾಗ ಖಾಲಿ ಮಾಡಿದ್ದಾನೆ.

ಬುಧವಾರ ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಹಾಗೂ ಸಹಾಯಕಿ ಮಹದೇವಮ್ಮ ಕರ್ತವ್ಯಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮಾಹಿತಿ ಪಡೆದುಕೊಂಡ ಪಂಡಿತಹಳ್ಳಿ ಗ್ರಾಮ ಪಂಚಾಯತ್​ ಪಿಡಿಒ ಮಹದೇವು ಸ್ಥಳ ಪರಿಶೀಲಿಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂಗನವಾಡಿ ಸಿಬ್ಬಂದಿ ಬಾಗಿಲು ತೆರದಾಗ ಘಟನೆ ಬೆಳಕಿಗೆ

ಅಡುಗೆ ತಯಾರಿಸಿಕೊಂಡು ಊಟ ಮಾಡಿರೋದು ಬಿಟ್ಟರೆ ಯಾವುದೇ ವಸ್ತುಗಳನ್ನ ಆತ ಕಳವು ಮಾಡದೇ ಬರಿಗೈಯಲ್ಲಿ ವಾಪಸಾಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೇ ತಟ್ಕೊಂಡು ಓಡಾಡುತ್ತಿದೆ, ಇದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ: ಸಿದ್ದರಾಮಯ್ಯ

Last Updated : Feb 23, 2022, 7:56 PM IST

For All Latest Updates

TAGGED:

ABOUT THE AUTHOR

...view details