ಮಂಡ್ಯ:ರಾಜ್ಯದಲ್ಲಿ ಯಾವುದೇ ಕೊರೊನಾ ವೈರಸ್ನಿಂದ ಬಳಲುವವರು ಪತ್ತೆಯಾಗಿಲ್ಲ. ರೋಗದ ಲಕ್ಷಣ ಇರುವವರು ಮಾತ್ರ ಮಾಸ್ಕ್ಗಳನ್ನು ಹಾಕಿಕೊಳ್ಳಬೇಕು. ಇಲ್ಲವೇ ನೆಗಡಿ, ಕೆಮ್ಮಿನಿಂದ ಬಳಲುವವರು ಸರ್ಜಿಕಲ್ ಮಾಸ್ಕ್ ಧರಿಸಬೇಕು ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ನಗರದ ಮಿಮ್ಸ್‌ಗೆ ಭೇಟಿ ನೀಡಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋವಿಡ್-19 ರೋಗದ ಬಗ್ಗೆ ತಪ್ಪು ಗ್ರಹಿಕೆಗಳು ಹರಡುತ್ತಿವೆ. ಇದಕ್ಕಾಗಿ ನಿತ್ಯ ಸಂಜೆ 6ಗಂಟೆಗೆ ಸರ್ಕಾರದಿಂದ ಬುಲೆಟಿನ್ ಮೂಲಕ ವಿವರಣೆ ನೀಡಲಾಗುತ್ತಿದೆ. ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.