ಮಂಡ್ಯ:ಎಲ್ಲರ ಸಹಕಾರದಿಂದ ಗೆಲ್ಲುವ ವಿಶ್ವಾಸವಿದೆ. ಫಲಿತಾಂಶ ಬಂದ ನಂತರ ನನ್ನ ಕಾರ್ಯವೈಖರಿಯನ್ನು ನೀವೇ ನೋಡಿ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ಕಾಂಗ್ರೆಸ್ ಸಹಕಾರದಿಂದ ಚುನಾವಣೆ ಎದುರಿಸಿರುವೆ. ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದರು.
ಸುಮಲತಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಕುಟುಂಬ ದ್ವೇಷದ ರಾಜಕಾರಣ ಮಾಡೋದಿಲ್ಲ. ಇನ್ನೂ ಆರೋಪ ಮಾಡೋದನ್ನ ನಿಲ್ಲಿಸಿಲ್ಲ. ದ್ವೇಷದ ರಾಜಕಾರಣ ನಮ್ಮ ಕುಟುಂಬಕ್ಕೆ ಅನಿವಾರ್ಯ ಅಲ್ಲ. ಅವರ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.
ನಾವು ಯಾವ ರೀತಿ ಟಾರ್ಗೆಟ್ ಮಾಡ್ತಾ ಇದೀವಿ. ಸಮಯ ವೇಸ್ಟ್ ಮಾಡಲು ನಾವು ರೆಡಿ ಇಲ್ಲ. ಅಯ್ಯೋ ರಾಮನೇ ಎಂದರು. ಚುನಾವಣೆ ನಂತರ ನಿಖಿಲ್ ನಾಪತ್ತೆ ವಿಚಾರವಾಗಿ, ನಾನು ಯಾವ ವಿದೇಶಕ್ಕೂ ಹೋಗಿಲ್ಲ. ಪೂಜೆ ನಡೆಯುತ್ತಿತ್ತು ಅಲ್ಲಿದ್ದೆ. ಜಮೀನು ಖರೀದಿ ವಿಚಾರ ನಾನೇ ಹೇಳಿದ್ದು. ಜಮೀನು ಖರೀದಿ ಎರಡು ಮೂರು ದಿನದ ಕೆಲಸವಲ್ಲ. ನಾಲ್ಕೈದು ತಿಂಗಳು ಆಗಬಹುದು ಎಂದರು.
ಕುಮಾರಣ್ಣ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರಲು ಗಮನ ಹರಿಸುತ್ತೇನೆ. ನಾನು ಗ್ರೌಂಡ್ ರಿಯಾಲಿಟಿ ಮೇಲೆ ಹೋಗುವ ವ್ಯಕ್ತಿ. ಮಾಧ್ಯಮಗಳು ನಮ್ಮ ಮೇಲೆ ಚೆಕ್ ಇಟ್ಟಿದ್ದವು. ನಮಗೆ ವಿಶ್ವಾಸ ಇದೆ. ನಮ್ಮ ಕುಟುಂಬವನ್ನು ಜಿಲ್ಲೆಯ ಜನ ಕೈ ಬಿಡುವುದಿಲ್ಲ. ನನಗೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದರು.
ಮೈತ್ರಿ ವಿಶ್ವಾಸದಲ್ಲಿ ಗೊಂದಲ ಇತ್ತು. ಅದನ್ನ ನಾಯಕರುಗಳು ಸರಿ ಮಾಡಿದ್ದಾರೆ. ಬೆಟ್ಟಿಂಗ್ ಬೇಡ. ಇದನ್ನು ನಾನು ಖಂಡಿಸುವೆ. ದೇವೇಗೌಡರ ರಾಜಕೀಯ ಜೀವನಕ್ಕೂ ನನ್ನ ರಾಜಕೀಯ ಪ್ರವೇಶಕ್ಕೂ ಹೋಲಿಕೆ ಬೇಡ. ಅವರದ್ದು ದೊಡ್ಡ ವ್ಯಕ್ತಿತ್ವ. ನನಗೆ ತಾತಾ ಶಹಬ್ಬಾಸ್ಗಿರಿ ಹೇಳಿ ಗೆಲುವಿನ ಆಶೀರ್ವಾದ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.