ಮಂಡ್ಯ: ಮದುವೆ ಮನೆಯಲ್ಲಿ ಡೋಲುಗಳನ್ನು ಕದ್ದಿದ್ದ ಕಳ್ಳನನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮದುವೆ ಮನೆಯಿಂದ ಡೋಲುಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳನ ಬಂಧನ - Kikkeri police station
ಮಾರ್ಚ್ 5ರಂದು ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರದ ಕಲ್ಯಾಣ ಮಂಟಪದಲ್ಲಿ ಡೋಲುಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಇದೀಗ ಕಿಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಕಳ್ಳನ ಬಂಧನ
ಚಿಕ್ಕಮಗಳೂರು ಜಿಲ್ಲಯ ಭದ್ರಾವತಿ ಮೂಲದ ಭಾಸ್ಕರ್ ಬಂಧಿತ ಆರೋಪಿ. ಮಾರ್ಚ್ 5ರಂದು ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರದ ಕಲ್ಯಾಣ ಮಂಟಪದಲ್ಲಿ ಡೋಲುಗಳನ್ನು ಕದ್ದಿದ್ದ. ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯದ ಆಧರಿಸಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ
ಮದುವೆಗೆ ಎಂದು ಮಂಗಳವಾದ್ಯಗಳನ್ನು ತಂದಿದ್ದ ವಾದ್ಯತಂಡ ಡೋಲುಗಳ ಕಳವಿನಿಂದ ಕಂಗಾಲಾಗಿತ್ತು. ಈ ಸಂಬಂಧ ಕಿಕ್ಕೇರಿ ಡೋಲುಗಳ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.