ಮಂಡ್ಯ :ತನ್ನ ಜನ್ಮದಿನದಂದು ಕೋವಿಡ್ನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಿ ಅಪ್ಪು ಪಿ ಗೌಡ ಮಾನವೀಯತೆ ಮೆರೆದಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಕೋವಿಡ್ನಿಂದ 5 ದಿನದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಅಪ್ಪು ನೆರೆವೇರಿಸಿದ್ದಾರೆ. ಹುಟ್ಟುಹಬ್ಬ ಆಚರಣೆಯ ಬದಲಾಗಿ ಇಂಥ ಸಮಾಜಮುಖಿ ಕಾರ್ಯ ಮಾಡಿದ ಅಪ್ಪುಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ವೀರೇಶ್ ಎಂಬುವರ ಪತ್ನಿ ಶಿಲ್ಪಶ್ರೀ ಎಂಬುವರು ಹೆರಿಗೆಗೆ ಹೋದ ಸಂದರ್ಭದಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ. ಸೋಂಕು ಇದ್ದರೂ ಹೆರಿಗೆ ವಿಭಾಗದ ತಜ್ಞ ವೈದ್ಯರು ಶಿಲ್ಪಶ್ರೀಗೆ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ್ದರು.