ಮಂಡ್ಯ: ಒಂದೆಡೆ ಕೊರೊನಾ ವೈರಸ್ ಭಯ ಕಾಡುತ್ತಿದ್ದರೆ, ಮತ್ತೊಂದು ಕಡೆ ಹಕ್ಕಿಗಳ ನಿಗೂಢ ಸಾವು ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ. ಏಕಾಏಕಿ ಗೂಡಿನಿಂದ ಬಿದ್ದು ಹಕ್ಕಿಗಳು ಸಾವಗೀಡಾಗುತ್ತಿವೆ.
ಪಕ್ಷಿಗಳ ನಿಗೂಢ ಸಾವು; ಹಕ್ಕಿಜ್ವರದ ಭಯದಲ್ಲಿ ಜನ - The mysterious death of birds in mandya
ಸಾವನ್ನಪ್ಪಿರುವ ಪಕ್ಷಿಗಳ ಪರೀಕ್ಷಾ ವರದಿಗಾಗಿ ಕಾಯುತ್ತಿರುವ ಗ್ರಾಮಸ್ಥರು, ಹಕ್ಕಿ ಜ್ವರ ಎಂಬ ಆತಂಕದಲ್ಲಿದ್ದಾರೆ.
ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ರಾತ್ರಿಯಿಂದ ಹಕ್ಕಿಗಳು ನಿಗೂಢವಾಗಿ ಸಾವಿಗೀಡಾಗುತ್ತಿವೆ. ವಿಚಾರ ತಿಳಿದ ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿಗಳು ಮರಣಗೊಂಡ ಪಕ್ಷಿಗಳ ಕಳೆಬರವನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಪ್ರಯೋಗಾಲಯದ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಇತ್ತ ಗ್ರಾಮಸ್ಥರು ಹಕ್ಕಿ ಜ್ವರದ ಭಯದಲ್ಲಿ ಕೂತಿದ್ದಾರೆ. ಈ ಸಂದರ್ಭ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಇದು ಹಕ್ಕಿ ಜ್ವರದ ಕಾರಣವಲ್ಲ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳಿಸಿದ್ದೇವೆ. ಭಯ ಬೇಡ ಎಂದು ಧೈರ್ಯ ತುಂಬಿದ್ದಾರೆ.