ಮಂಡ್ಯ:ನಾಪತ್ತೆಯಾಗಿದ್ದ ಮಹಿಳೆ ಮೂಟೆಯಲ್ಲಿ ಶವವಾಗಿ ಸಿಕ್ಕ ಘಟನೆ ಮದ್ದೂರು ಪಟ್ಟಣದ ಶಿಂಷಾ ನದಿ ಸಮೀಪ ನಡೆದಿದೆ.
ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಮೂಟೆಯಲ್ಲಿ ಪತ್ತೆ.. - ಮಂಡ್ಯ ಅಪರಾಧ ಸುದ್ದಿ
5 ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದಾರೆ ಅಂತಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿತ್ತು. ಆದರೆ, ಈಗ ಅದೇ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.
ಶವವಾಗಿ ಸಿಕ್ಕ ಮಹಿಳೆ
ಮದ್ದೂರು ಪಟ್ಟಣದ ಅಬ್ಸುಲ್ ಅಜೀಜ್ ಎಂಬುವರ ಪುತ್ರಿ ಮೊಬೀನಾ(42) ಶವವಾಗಿ ಮೋಟೆಯಲ್ಲಿ ದೊರೆತಿದ್ದು, ಸ್ಥಳಕ್ಕೆ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ 6 ದಿನಗಳ ಹಿಂದೆ ಮದ್ದೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು.ಇನ್ನು, ಈಗ ಮೂಟೆಯಲ್ಲಿ ಶವವಾಗಿ ಸಿಕ್ಕಿದ್ದು, ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.