ಮಂಡ್ಯ: ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ 6 ತಿಂಗಳ ಗಂಡು ಚಿರತೆ ಬಿದ್ದ ಘಟನೆ ಮದ್ದೂರು ತಾಲೂಕಿನ ಅರಸನ ಬೆಟ್ಟದ ಅರಣ್ಯದಲ್ಲಿ ನಡೆದಿದೆ.
ಬೋನಿಗೆ ಬಿದ್ದ ಚಿರತೆ.... ನಿಟ್ಟುಸಿರು ಬಿಟ್ಟ ಜನತೆ - latest news of mandya
ಇತ್ತೀಚೆಗೆ ಮಂಡ್ಯ ಭಾಗದ ಸುತ್ತಮುತ್ತಲ ಗ್ರಾಮಗಳಿಗೆ ಚಿರತೆ ನುಗ್ಗಿ ಉಪಟಳ ನೀಡಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ 6 ತಿಂಗಳ ಗಂಡು ಚಿರತೆ ಸಿಕ್ಕಿಬಿದ್ದಿದೆ.
ಬೋನಿಗೆ ಬಿದ್ದ ಚಿರತೆ....ನಿಟ್ಟುಸಿರು ಬಿಟ್ಟ ಜನತೆ
ಇತ್ತೀಚೆಗೆ ಮಂಡ್ಯ ಭಾಗದ ಸುತ್ತಮುತ್ತಲ ಗ್ರಾಮಗಳಿಗೆ ಚಿರತೆ ನುಗ್ಗಿ ಉಪಟಳ ನೀಡುತ್ತಿತ್ತು. ಗ್ರಾಮಸ್ಥರು ಚಿರತೆ ಸೆರೆಗೆ ಒತ್ತಾಯ ಮಾಡಿದ್ದ ಹಿನ್ನೆಲೆ ಬೋನ್ ಇಡಲಾಗಿದ್ದು, ಇದೀಗ ಚಿರತೆ ಬೋನಿಗೆ ಬಿದ್ದಿದೆ.
ಚಿರತೆ ಸೆರೆಯಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಸೆರೆ ಸಿಕ್ಕ ಚಿರತೆಯನ್ನು ಮಲೆಮಹದೇಶ್ವರ ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.