ಕರ್ನಾಟಕ

karnataka

ETV Bharat / state

ಸಕ್ಕರೆ ನಾಡಿನ ರೈತರಿಗೆ ಸಿಹಿ ನೀಡಿದ ಕೆಆರ್​​ಎಸ್​: 100 ಅಡಿ ತುಂಬಿದ ಅಣೆಕಟ್ಟು - ಮಂಡ್ಯ 100 ಅಡಿ ತುಂಬಿದ ಅಣೆಕಟ್ಟು ಸುದ್ದಿ

ಅಣೆಕಟ್ಟೆಯ ಗರಿಷ್ಠ ಸಂಗ್ರಹ ಸಾಮರ್ಥ್ಯ 49 ಟಿಎಂಸಿ. ಮಳೆಗಾಲದ ಮೊದಲ ಅವಧಿಯಲ್ಲಿ ಕೆಆರ್​ಎಸ್​100 ಅಡಿ ತುಂಬಿರೋದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಕೆಆರ್‌ಎಸ್ ಅಣೆಕಟ್ಟೆ
ಕೆಆರ್‌ಎಸ್ ಅಣೆಕಟ್ಟೆ

By

Published : Jul 8, 2020, 9:04 AM IST

ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು ಮುಂಗಾರಿನ ಮೊದಲ ಮಳೆಗೆ 100 ಅಡಿ ತುಂಬಿದೆ.

124.80 ಅಡಿಯ ಗರಿಷ್ಠ ಮಟ್ಟವನ್ನು ಹೊಂದಿದ್ದು, ಬೆಳಗ್ಗೆ 7ರ ಸಮಯಕ್ಕೆ 100.33 ಅಡಿ ತಲುಪಿದೆ. ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದ್ದು, 8,972 ಕ್ಯೂಸೆಕ್ ನೀರು ಹರಿದು ಬಂದಿದೆ. ಹೊರ ಹರಿವು 458 ಕ್ಯೂಸೆಕ್ ಇದ್ದು, ಸದ್ಯ ನೀರಿನ ಸಂಗ್ರಹ 23.071 ಟಿಎಂಸಿ ಇದೆ.

ಅಣೆಕಟ್ಟೆಯ ಗರಿಷ್ಠ ಸಂಗ್ರಹ 49 ಟಿಎಂಸಿ ಆಗಿದೆ. ಮಳೆಗಾಲದ ಮೊದಲ ಅವಧಿಯಲ್ಲಿ ಕೆಆರ್​ಎಸ್​100 ಅಡಿ ತುಂಬಿರೋದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಮಡಿಕೇರಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕಾವೇರಿ ನದಿಯ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ABOUT THE AUTHOR

...view details