ಮಂಡ್ಯ:ಕಳೆದ ರಾತ್ರಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಒಂದು ಮನೆ ಕುಸಿದು, ಮತ್ತೊಂದು ಮನೆ ಜಖಂಗೊಂಡಿರುವ ಘಟನೆ ಕೆ.ಆರ್. ಪೇಟೆಯ ಹೊಸಹೊಳ ಬಡಾವಣೆಯಲ್ಲಿ ನಡೆದಿದೆ.
ಭಾರಿ ಮಳೆ-ಸಿಡಿಲಿಗೆ ಒಂದು ಮನೆ ಕುಸಿತ, ಮತ್ತೊಂದು ಮನೆ ಜಖಂ
ಕಳೆದ ರಾತ್ರಿ ಮಂಡ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿಗೆ ಒಂದು ಮನೆ ಕುಸಿದು, ಮತ್ತೊಂದು ಮನೆ ಜಖಂಗೊಂಡ ಘಟನೆ ಕೆ.ಆರ್. ಪೇಟೆಯ ಹೊಸಹೊಳ ಬಡಾವಣೆಯಲ್ಲಿ ನಡೆದಿದೆ.
ಮಂಡ್ಯದಲ್ಲಿ ಸಿಡಿಲು ಬಡಿದು ಮನೆ ಕುಸಿತ : ಮತ್ತೊಂದು ಮನೆ ಜಖಂ
ಬಡಾವಣೆಯ ನಿವಾಸಿಯಾದ ಮೀಸೆ ಶಿವಣ್ಣ ಎಂಬುವರ ಮನೆ ಕುಸಿದಿದ್ದರೆ, ವಿನೋದಮ್ಮ ಎಂಬವರ ಮನೆ ಜಖಂಗೊಂಡಿದೆ. ಆ ವೇಳೆ ಮನೆಯಲ್ಲಿದ್ದವರಿಗೆ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಪುರಸಭೆ ಅಧಿಕಾರಿಗಳು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.