ಮಂಡ್ಯ: ಸ್ಥಳೀಯರ ವಿರೋಧದ ನಡುವೆಯೂ ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಯ ಶವ ಸಂಸ್ಕಾರ ನಗರದ ಹೊರ ವಲಯದ ಯತ್ತಗದಹಳ್ಳಿ ಬಳಿಯ ಸ್ಮಶಾನದಲ್ಲಿ ನಡೆಯಿತು.
ಸ್ಥಳೀಯರ ವಿರೋಧದ ನಡುವೆಯೇ ಜನವಸತಿ ಪ್ರದೇಶದ ಬಳಿ ಸೋಂಕಿತ ವ್ಯಕ್ತಿಯ ಶವ ಸಂಸ್ಕಾರ - funeral of a man died of corona
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರ ಮಂಡ್ಯ ನಗರದ ಹೊರವಲಯದ ಯತ್ತಗದಹಳ್ಳಿ ಬಳಿಯ ಸ್ಮಶಾನದಲ್ಲಿ ನಡೆಯಿತು.

ಮದ್ದೂರಿನ ಎಳನೀರು ವ್ಯಾಪಾರಿ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಸಾವಿನ ನಂತರ ಆತ ಕೊರೊನಾ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿ ಬಂದಿತ್ತು. ಶವ ಸಂಸ್ಕಾರಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಿ ಸಂಸ್ಕಾರ ನಡೆಸಲು ಮುಂದಾಗಿತ್ತು. ಆದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ವಸತಿ ಪ್ರದೇಶದ ಸಮೀಪ ಸಂಸ್ಕಾರಕ್ಕೆ ಜನರು ವಿರೋಧಿಸಿದ್ದರು. ನಂತರ ಪೊಲೀಸ್ ಭದ್ರತೆಯಲ್ಲಿ ಸಂಸ್ಕಾರ ಮಾಡಲಾಯಿತು. ಅಂತ್ಯ ಸಂಸ್ಕಾರದ ವೇಳೆ ಪೊಲೀಸರ ಸಹಾಯ ಪಡೆಯಲಾಯಿತು.
ಮಂಡ್ಯ ತಹಶೀಲ್ದಾರ್ ನಾಗೇಶ್ ಸ್ಥಳೀಯರ ಮನವೊಲಿಸಿ, ಅಂತ್ಯ ಸಂಸ್ಕಾರದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಭಯ ಬೇಡ ಎಂದು ಮನವಿ ಮಾಡಿ ಕೊನೆಗೂ ಅಂತ್ಯ ಸಂಸ್ಕಾರ ಮಾಡಿದರು.