ಕರ್ನಾಟಕ

karnataka

ETV Bharat / state

ಕಣ್ಣು ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಕುಟುಂಬ - undefined

ವೃದ್ಧೆಯೊಬ್ಬರ ನಿಧನದ ನಂತರ ಕುಟುಂಬಸ್ಥರು ಆಕೆಯ ಕಣ್ಣನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮರಣ ನಂತರ ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ವೃದ್ಧೆ

By

Published : Jun 10, 2019, 6:57 PM IST

ಮಂಡ್ಯ:ದಾನಗಳಲ್ಲೇ ಶ್ರೇಷ್ಠ ದಾನ ನೇತ್ರದಾನ. ವೃದ್ಧೆಯೊಬ್ಬರು ಸಾವಿಗೀಡಾದ ನಂತರ ಕುಟುಂಬದ ಸದಸ್ಯರು ಆಕೆಯ ಕಣ್ಣನ್ನು ದಾನ ಮಾಡೋ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕಣ್ಣಿನ ದಾನದ ಮೂಲಕ ಮಾನವೀಯತೆ ಮೆರೆದ ಕುಟುಂಬ

ನಗರದ ಸ್ವರ್ಣಸಂದ್ರದ ಲಲಿತಮ್ಮ(88) ಸಾವಿಗೀಡಾದ ನಂತರ ಆಕೆಯ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಈ ಮೂಲಕ ಲಲಿತಮ್ಮ ಪುತ್ರ ಕುಮಾರ್ ನಾರಾಯಣ್ ಹಾಗೂ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗುವ ನಿರ್ಧಾರ ಕೈಗೊಂಡಿದ್ದಾರೆ.

ಸರಿಯಾದ ಸಮಯಕ್ಕೆ ವಶಕ್ಕೆ ಪಡೆದ ವೈದ್ಯರು

ಮೊದ ಮೊದಲು ಕುಟುಂಬದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ಎಲ್ಲರನ್ನೂ ಒಪ್ಪಿಸಿ ಕಣ್ಣುಗಳನ್ನು ದಾನ ಮಾಡಿದ್ದಾರೆ. ಎರಡೂ ಕಣ್ಣುಗಳನ್ನು ವೈದ್ಯರು ಸರಿಯಾದ ಸಮಯಕ್ಕೆ ವಶಕ್ಕೆ ಪಡೆದಿದ್ದಾರೆ. ಕುಟುಂಬದ ಈ ಸಾಮಾಜಿಕ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details