ಮಂಡ್ಯ: ಅನಾವಶ್ಯಕವಾಗಿ ಓಡಾಡುತ್ತಿದ್ದವರ ಬೈಕ್ ಕೀ ಕಿತ್ತುಕೊಂಡ ಹಿನ್ನೆಲೆ, ಪೊಲೀಸರನ್ನೇ ವ್ಯಕ್ತಿಯೋರ್ವ ಪ್ರಶ್ನಿಸಿ ಆವಾಜ್ ಹಾಕಿದ್ದಾನೆ.
ಮಂಡ್ಯದ ನೂರಡಿ ರಸ್ತೆಯಲ್ಲಿ ಘಟನೆ ನಡೆದಿದೆ. ಯಾಕ್ರಿ ಬೈಕ್ ಕೀ ತಗೊಳ್ತೀರಾ ಎಂದು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬಂಡವಾಳ ಹಾಕಿದ್ದೀರಾ? ಎಂದು ಆವಾಜ್ ಹಾಕಿದ್ದಾನೆ. ಅದಕ್ಕೆ ನೀವು ರಸ್ತೆಯಲ್ಲಿ ನಿಂತು ಕೆಲಸ ಮಾಡಿ ಗೊತ್ತಾಗುತ್ತೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.