ಕರ್ನಾಟಕ

karnataka

ETV Bharat / state

ಕೋವಿಡ್​​​​ನಿಂದ ಮೃತಪಟ್ಟವರ ಅಸ್ಥಿಗಳಿಗೆ ಸರ್ಕಾರದಿಂದ ಮುಕ್ತಿ - mandya latest news

ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ 2 ಸಾವಿರಕ್ಕೂ ಹೆಚ್ಚು ಮಡಿಕೆಗಳಲ್ಲಿ ಸಂಗ್ರಹವಾಗಿರುವ ಕೋವಿಡ್ ಸೋಂಕಿತರ ಅಸ್ಥಿಗಳನ್ನು ಇಂದು ಸಾಮೂಹಿಕ ವಿಸರ್ಜನೆ ಮಾಡಲಾಗುತ್ತಿದೆ.

mandya
ಕೋವಿಡ್​​​​ನಿಂದ ಮೃತಪಟ್ಟವರ ಅಸ್ಥಿಗಳಿಗೆ ಸರ್ಕಾರದಿಂದ ಮುಕ್ತಿ

By

Published : Jun 2, 2021, 12:35 PM IST

Updated : Jun 2, 2021, 12:47 PM IST

ಮಂಡ್ಯ: ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ವಿವಿಧ ಚಿತಾಗಾರಗಳಲ್ಲಿ ನೆರವೇರಿಸಲಾಗಿತ್ತು. ಆ ನಂತರ ಮೃತರ ಸಂಬಂಧಿಕರು ಅಸ್ಥಿ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಅವರಿಗೆ ಸುಮಾರು 15 ದಿನಗಳ ಕಾಲ ಅಸ್ಥಿ ತೆಗೆದುಕೊಂಡು ಹೋಗಲು ತಿಳಿಸಲಾಗಿತ್ತು. ಈವರೆಗೂ ಯಾರು ಕೂಡ ಅಸ್ಥಿ ಪಡೆಯಲು ಮುಂದೆ ಬರದ ಹಿನ್ನೆಲೆಯಲ್ಲಿ ಅಸ್ಥಿಗಳಿಗೆ ಸರ್ಕಾರ ಮುಕ್ತಿ ನೀಡಲು ಮುಂದಾಗಿದೆ.

ಕೋವಿಡ್​​​​ನಿಂದ ಮೃತಪಟ್ಟವರ ಅಸ್ಥಿಗಳಿಗೆ ಸರ್ಕಾರದಿಂದ ಮುಕ್ತಿ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳವಾಡಿ ಗ್ರಾಮದ ಕಾವೇರಿ ನದಿ ದಂಡೆಯ ಚಿಕ್ಕ ಮುತ್ತತ್ತಿ ಪ್ರದೇಶದಲ್ಲಿ ಸಾಮೂಹಿಕ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಕಂದಾಯ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ಹಾಗೂ ಪುರೋಹಿತ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾರ ವೈದಿಕತ್ವದಲ್ಲಿ ಈ ಸಾಮೂಹಿಕ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದೆ.

ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ 2 ಸಾವಿರಕ್ಕೂ ಹೆಚ್ಚು ಮಡಿಕೆಗಳಲ್ಲಿ ಸಂಗ್ರಹವಾಗಿರುವ ಅಸ್ಥಿಗಳನ್ನು ಇಂದು ಸಾಮೂಹಿಕ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ.

ಓದಿ:ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ... ಕಾರಣ ನಿಗೂಢ!

Last Updated : Jun 2, 2021, 12:47 PM IST

ABOUT THE AUTHOR

...view details