ಕರ್ನಾಟಕ

karnataka

ETV Bharat / state

ಅಮಾಯಕ ವಿದ್ಯಾರ್ಥಿನಿಯರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆ, ಕಾಂಗ್ರೆಸ್ ಕೈವಾಡ: ರೇಣುಕಾಚಾರ್ಯ ಆರೋಪ - ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಮತ್ತು ಉಗ್ರ ಸಂಘಟನೆ ಕೈವಾಡ

ಸಮವಸ್ತ್ರ ‌ಮೊದಲಿನಿಂದಲೂ ಇದೆ. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಮುಗ್ಧರು. ಅಮಾಯಕ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗಬಾರದು, ಸಮವಸ್ತ್ರ ಧರಿಸಿ ಶಾಲೆಗೆ ಬನ್ನಿ ಎಂದು ರೇಣುಕಾಚಾರ್ಯ ಮನವಿ ಮಾಡಿದರು.

ರೇಣುಕಾಚಾರ್ಯ ಪ್ರತಿಕ್ರಿಯೆ
ರೇಣುಕಾಚಾರ್ಯ ಪ್ರತಿಕ್ರಿಯೆ

By

Published : Feb 10, 2022, 3:33 PM IST

Updated : Feb 10, 2022, 4:35 PM IST

ಬೆಂಗಳೂರು: ಹಿಜಾಬ್ ವಿವಾದದಲ್ಲಿ ಅಮಾಯಕ ವಿದ್ಯಾರ್ಥಿನಿಯರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳ ಕೈಚಳಕ ಇದೆ. ಇದರ ಜೊತೆಗೆ ಕಾಂಗ್ರೆಸ್ ಕೈವಾಡ ಇದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಸರ್ಕಾರದ ವರ್ಚಸ್ಸು ಹಾಳು ಮಾಡಲು ಹಿಜಾಬ್ ವಿಚಾರ ತೆಗೆದುಕೊಂಡು ಮುಗ್ಧ ವಿದ್ಯಾರ್ಥಿಗಳ ಮನಸು ಹಾಳು ಮಾಡಲಾಗಿದೆ ಎಂದು ಕಿಡಿಕಾರಿದರು.

ಸಮವಸ್ತ್ರ ‌ಮೊದಲಿನಿಂದಲೂ ಇದೆ. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಮುಗ್ಧರು. ಅಮಾಯಕ ವಿದ್ಯಾರ್ಥಿಗಳ ಶಿಕ್ಷಣ ಹಾಳಾಗಬಾರದು, ಸಮವಸ್ತ್ರ ಧರಿಸಿ ಶಾಲೆಗೆ ಬನ್ನಿ ಎಂದು ಮನವಿ ಮಾಡಿದರು.


ನಾನು ಅಲ್ಪಸಂಖ್ಯಾತ ವಿರೋಧಿ ಅಲ್ಲ. ಕೇಸರಿ ಶಾಲು ಖರೀದಿ ಮಾಡುವುದು, ಕೊಡುವುದು ನಮ್ಮ ವೈಯಕ್ತಿಕ ವಿಚಾರ ಎಂದ ರೇಣುಕಾಚಾರ್ಯ, ಕಾಂಗ್ರೆಸ್ ದೇಶ ವಿರೋಧಿಗಳ ಪರವೋ ಅಲ್ಲವೋ‌ ಅಂತಾ ಶಿವಕುಮಾರ್ ಸ್ಪಷ್ಟೀಕರಣ ಕೊಡಲಿ ಎಂದು ಸವಾಲು ಹಾಕಿದರು.

ಈಗ ಜಮೀರ್ ಅಹ್ಮದ್, ಯು.ಟಿ. ಖಾದರ್, ತನ್ವೀರ್ ಸೇಠ್ ಎಲ್ಲರೂ‌ ಮಾತಾಡ್ತಾರೆ.‌ ಹಿಂದೆ ತನ್ವೀರ್ ಸೇಠ್ ತಂದೆ ಅಜೀಜ್ ಸೇಠ್ ಕೋಮು ಗಲಭೆ ಸೃಷ್ಟಿ ಮಾಡಿಸಿ ಅವರ ಪಕ್ಷದ ಸಿಎಂ ಅನ್ನೇ ಕೆಳಗಿಳಿಸಿದ್ದರು ಎಂದು ದೂರಿದರು.

(ಇದನ್ನೂ ಓದಿ: ಕ್ರಿಕೆಟ್ ಬಾಲ್ ವಿಚಾರವಾಗಿ ಗಲಾಟೆ: ನಡು ರಸ್ತೆ ಮೇಲೆ ಬಡಿದಾಡಿಕೊಂಡ ಗ್ರಾಮಸ್ಥರು)

ಡಿ.ಕೆ.ಶಿವಕುಮಾರ್ ದೊಡ್ಡವರು.‌ ಭ್ರಷ್ಟಾಚಾರ ಮಾಡಿ ತಿಹಾರಿ ಜೈಲಿಗೆ ಹೋದ ಬಂದ ವ್ಯಕ್ತಿ.‌ ದೊಡ್ಡ ಬಂಡೆಗಳನ್ನು ಒಡೆದು ಲೂಟಿ ಮಾಡಿದವರು. ನೇರವಾಗಿ ರಾಜಕಾರಣದ ಬಗ್ಗೆ ಮಾತನಾಡಬೇಕು. ಆದರೆ, ವೈಯಕ್ತಿಕ ಟೀಕೆ ಮಾಡಬಾರದು. ಡಿಕೆಶಿ ಇನ್ನು ಮುಂದಾದರೂ ಗೌರವದಿಂದ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.

ರೇಣುಕಾಚಾರ್ಯ ಪ್ರತಿಕ್ರಿಯೆ

ಕನಕಪುರದ ಬಂಡೆಗಳನ್ನ ಲೂಟಿ ಮಾಡಿ ಸಾಗಿಸಿದ್ದಾರೆ.‌ ಇಂತಹ ದೊಡ್ಡವರ ಬಗ್ಗೆ ಮಾತನ್ನಾಡುವುದಿಲ್ಲ. ನಾನು ಇವರಷ್ಟು ದೊಡ್ಡವನಲ್ಲ. ನಾನು ವೈಯಕ್ತಿಕವಾಗಿ ಮಾತನಾಡುವುದಿಲ್ಲ. ರಾಜಕೀಯವಾಗಿ ಟೀಕೆ ಮಾಡಿದರೆ ಎದುರಿಸುತ್ತೇನೆ. ವೈಯಕ್ತಿಕ ವಿಚಾರಗಳನ್ನು ತಂದು ಟೀಕಿಸುವುದು ಯಾಕೆ? ನಾನು‌ ಹಳ್ಳಿ ಹೈದ. ನನಗೂ ಮಾತನಾಡಲು ಬರುತ್ತದೆ ಎಂದು ಹೇಳಿದರು.

ಡಿಕೆಶಿ ಸಿಎಂ ಆಗುವುದು ಹಗಲುಗನಸು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಹಗಲುಗನಸು ಕಾಣುತ್ತಿದ್ದಾರೆ. ಅದು ಆಗುವುದು ಕನಸಿನ ಮಾತು. ಸಿದ್ದರಾಮಯ್ಯ ಹಾಗೂ ಅವರ ನಡುವೆ ಗುದ್ದಾಟ ನಡೆಯುತ್ತಿದೆ ಎಂದು ಟೀಕಿಸಿದರು.

ಡಿ.ಕೆ. ಶಿವಕುಮಾರ್​​ಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮಾತಾಡಿದರೆ ಅದಕ್ಕೆ ಏನು ಮಾತಾಡಬೇಕು ಅಂತಾ ನನಗೆ ಚೆನ್ನಾಗಿ ಗೊತ್ತಿದೆ.‌ ವೈಯಕ್ತಿಕ ಟೀಕೆ ಮಾಡಿದರೆ ನಾನು ನನ್ನದೇ ಭಾಷೆಯಲ್ಲಿ ಉತ್ತರ ನೀಡುತ್ತೇನೆ. ಶಿವಕುಮಾರ್ ಭ್ರಮಾಲೋಕದಲ್ಲಿ ಇರುವುದು ಬೇಡ ಎಂದು ವ್ಯಂಗ್ಯವಾಡಿದರು.

ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದರು ಅಂತಾ ಕಾಂಗ್ರೆಸ್ ಹಸಿ ಸುಳ್ಳು ಹೇಳಿತು. ಸಾಂದರ್ಭಿಕವಾಗಿ ಮುಗ್ಧ ವಿದ್ಯಾರ್ಥಿಗಳು ಕೇಸರಿ ಧ್ವಜ ಹಾರಿಸಿದ್ದಾರೆ. ದೇಶ ಪ್ರೇಮದಿಂದ ಕೇಸರಿ ಧ್ವಜ ಹಾರಿಸಿರಬಹುದು. ಮಕ್ಕಳಿಗೆ ಅರ್ಥ ಆಗಿಲ್ಲ, ಗೊತ್ತಾಗಿಲ್ಲ. ಖಾಲಿ ಕಂಬಕ್ಕೆ ಕೇಸರಿ ಧ್ವಜ ಹಾರಿಸಿದ್ದಾರೆ ಅದು ತಪ್ಪು ಅಂತಾ ನಾನು ಹೇಳಲು ಆಗಲ್ಲ.

ರಾಷ್ಟ್ರ ಧ್ವಜದ ಗೌರವವನ್ನು ವಿದ್ಯಾರ್ಥಿಗಳು ಕಡಿಮೆ‌ ಮಾಡಿಲ್ಲ. ಮುಗ್ಧ ಮಕ್ಕಳು ಏನೂ ಅರಿವಾಗದೇ ಕೇಸರಿ ಧ್ವಜ ಹಾರಿಸಿದ್ದಾರೆ. ಅದು ತಪ್ಪು ಸರಿ ಅಂತಾ ಹೇಳಲು ಆಗಲ್ಲ. ಸಚಿವ ಈಶ್ವರಪ್ಪ ಹಿರಿಯರು, ಅವರ ಬಗ್ಗೆ ಮಾತಾಡಲ್ಲ ಎಂದರು.

ಕಾದು ನೋಡೋಣ: ಸಚಿವ ಸ್ಥಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾದು ನೋಡೋಣ. ನಮ್ಮ‌ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ‌ ಮಾತಾಡಿದ್ದೇನೆ. ನಾಲ್ಕು ಗೋಡೆಯ ನಡುವಿನ ಮಾತುಕತೆ ಬಹಿರಂಗವಾಗಿ ಹೇಳಲ್ಲ ಎಂದು ಹೇಳಿದರು.

(ಇದನ್ನೂ ಓದಿ: ಕಿಡಿಗೇಡಿಗಳ ಕೆಲಸದಿಂದ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದೇವೆ: ಸಚಿವ ಬಿ.ಸಿ.ನಾಗೇಶ್)

ಪ್ರಿಯಾಂಕಾ ಗಾಂಧಿ ಬಿಕಿನಿ ಅಂತಾ ಮಾತಾಡಿದ್ದು ತಪ್ಪು, ಅದರ ಬಗ್ಗೆ ಮಾತಾಡಿದ್ದೇನೆ. ಉಡುಪು ಮಹಿಳೆಯರ ವೈಯಕ್ತಿಕ ವಿಚಾರ. ಅದರ ಬಗ್ಗೆ ಮಾತಾಡಲ್ಲ. ನಿನ್ನೆ ಮಾತಾಡುವಾಗ ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದೇನೆ. ಸ್ತ್ರೀಯರ ಬಗ್ಗೆ ಬಿಜೆಪಿಗೆ, ಸರ್ಕಾರಕ್ಕೆ, ನನಗೆ ಅಪಾರ ಗೌರವ ಇದೆ ಎಂದು ತಿಳಿಸಿದರು.

Last Updated : Feb 10, 2022, 4:35 PM IST

ABOUT THE AUTHOR

...view details