ಮಂಡ್ಯ:ಕೊರೊನಾ ತಪಾಸಣಾ ಚೆಕ್ ಪೋಸ್ಟ್ ಬಳಿ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಐವರು ಪೊಲೀಸರು ಪ್ರಾಣಾಪಾಯದಿಂದ ಪಾರಾದ ಘಟನೆ ಶ್ರೀನಿವಾಸಪುರ ಚೆಕ್ ಪೋಸ್ಟ್ ಬಳಿ ನಡೆದಿದೆ.
ಬ್ಯಾರಿಕೇಡ್ಗೆ ಗುದ್ದಿ ಟೆಂಪೋ ಪಲ್ಟಿ: ಪ್ರಾಣಾಪಾಯದಿಂದ ಐವರು ಪೊಲೀಸರು ಪಾರು - latest accident news in mandya
ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬಂದ KA 11, 4020 ನಂಬರ್ ಪ್ಲೇಟ್ ಹೊಂದಿದ್ದ ಟೆಂಪೋ ಚೆಕ್ ಪೋಸ್ಟ್ ಬ್ಯಾರಿಕೇಡ್ಗೆ ಗುದ್ದಿ ಪಲ್ಟಿಯಾಗಿದ್ದು, ಘಟನೆ ವೇಳೆ ಐವರು ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟೆಂಪೋ ಪಲ್ಟಿ
ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬಂದ ಟೆಂಪೋ, ಚೆಕ್ ಪೋಸ್ಟ್ ಬ್ಯಾರಿಕೇಡ್ಗೆ ಗುದ್ದಿ ಪಲ್ಟಿಯಾಗಿದೆ. ಘಟನೆ ವೇಳೆ ತಪಾಸಣೆ ನಡೆಸುತ್ತಿದ್ದ ಓರ್ವ ಎಎಸ್ಐ ಹಾಗೂ ನಾಲ್ಕು ಮಂದಿ ಪೊಲೀಸರು ಜಂಪ್ ಮಾಡಿದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.