ಕರ್ನಾಟಕ

karnataka

ETV Bharat / state

'ಕಲ್ಯಾಣ ಮಂಟಪದ ಮೇಲೆ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿಗಳ ದಾಳಿ' - Mandya

ಸಿಆರ್​ಪಿಸಿ ಸೆಕ್ಷನ್ ಅಡಿ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Mandya
'ಕಲ್ಯಾಣ ಮಂಟಪದ ಮೇಲೆ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿಗಳ ದಾಳಿ'

By

Published : May 24, 2021, 1:03 PM IST

ಮಂಡ್ಯ: ಕೊರೊನಾ‌ ಮಾರ್ಗಸೂಚಿ ಉಲ್ಲಂಘಿಸಿ ಹೆಚ್ಚು ಜನರನ್ನು‌ ಸೇರಿ‌ಸಿ ಮದುವೆ ಸಮಾರಂಭ ನಡೆಸುತ್ತಿದ್ದ ಕಲ್ಯಾಣ ಮಂಟಪದ ಮೇಲೆ ಟಾಸ್ಕ್ ಫೋರ್ಸ್ ಕಮಿಟಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

'ಕಲ್ಯಾಣ ಮಂಟಪದ ಮೇಲೆ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿಗಳ ದಾಳಿ'

ಮಂಡ್ಯ ತಾಲೂಕಿನ ಬಿ. ಹೊಸೂರು ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು‌ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಪೊಲೀಸರ ಜೊತೆ ದಾಳಿ ನಡೆಸಿದ್ದಾರೆ.

ಈ ವೇಳೆ ಮದುವೆ ಸಮಾರಂಭ ನಡೆಸುತ್ತಿದ್ದವರು‌ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಪ್ರಕರಣಕ್ಕೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ವಾಗ್ವಾದ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ.

ಸಿಆರ್​ಪಿಸಿ ಸೆಕ್ಷನ್ ಅಡಿ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details