ಮಂಡ್ಯ:ಕೆ.ಆರ್.ಪೇಟೆ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಮಧ್ಯೆ ತಾಲೂಕು ಸರರ್ವೇಯರ್ ದೇವೇಗೌಡ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ರೈತರ ಸಮಸ್ಯೆ ನಿವಾರಣೆಯೇ ನನ್ನ ಮೊದಲ ಗುರಿ: ಕೆ.ಆರ್.ಪೇಟೆ ಪಕ್ಷೇತರ ಅಭ್ಯರ್ಥಿ - Taluk Surveyor for Filed His Nomination In KR pura
ಕೆ.ಆರ್.ಪೇಟೆ ಉಪ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಇದರ ಮಧ್ಯೆ ತಾಲೂಕು ಸರರ್ವೇಯರ್ ದೇವೇಗೌಡ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಸರ್ವೇಯರ್ ದೇವೇಗೌಡ ಮೂಲತಃ ನಾಟನಹಳ್ಳಿಯ ನಿವಾಸಿ. ತಾಲೂಕು ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಇನ್ನೂ 6 ವರ್ಷಗಳ ಸೇವಾವಧಿ ಇದ್ದರೂ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಯೇ ನನ್ನ ಮೊದಲ ಆದ್ಯತೆ ಎಂದು ಹೇಳಿಕೊಂಡು ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ.
ದೇವೇಗೌಡರು ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದು, ಇವರ ಕಾರ್ಯವೈಖರಿಗೆ ತಾಲೂಕಿನ ರೈತರು ಫಿದಾ ಆಗಿದ್ದಾರೆ. ಇವರ ರೈತ ಪರ ಕಾಳಜಿಯನ್ನು ಗಮನಿಸಿದ ರೈತರು ಇದೀಗ ಜನಸೇವೆಗಾಗಿ ಇವರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಅಲ್ಲದೆ ಇವರನ್ನು ಗೆಲ್ಲಿಸಲು ರೈತರು ಪಣ ತೊಟ್ಟಿದ್ದಾರೆ.
TAGGED:
KR pura By Election News