ಕರ್ನಾಟಕ

karnataka

ETV Bharat / state

ಮಹಿಳಾ ನೌಕರರಿಗೆ ಸಿಹಿ ಸುದ್ದಿ: ನಾಳೆಯಿಂದ ಮೈಸೂರು-ಬೆಂಗಳೂರು ರೈಲಿನಲ್ಲಿ ಮಹಿಳಾ ಬೋಗಿ - ಸಂಸದೆ ಸುಮಲತಾ ಪ್ರಯತ್ನಕ್ಕೆ ಮೊದಲ ಯಶಸ್ಸು

ಸಂಸದೆ ಸುಮಲತಾ ಅಂಬರೀಶ್​ ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯ ಸ್ಪಂದಿಸಿದ್ದು, ಮಂಡ್ಯದ ಮೆಮೊ ರೈಲಿನಲ್ಲಿ ಮಹಿಳಾ ಬೋಗಿಗಳಿಗೆ ಚಾಲನೆ ಸಿಗಲಿದೆ.

ರೈಲ್ವೆ ಇಲಾಖೆಯಿಂದ ಮಹಿಳಾ ನೌಕರರಿಗೆ ಸಿಹಿ ಸುದ್ದಿ

By

Published : Oct 30, 2019, 8:11 PM IST

ಮಂಡ್ಯ:ಮಹಿಳಾ ನೌಕರರ ದೃಷ್ಟಿಯಿಂದ ರೈಲಿನಲ್ಲಿ ಮಹಿಳಾ ಬೋಗಿ ಒದಗಿಸಬೇಕು ಎಂಬ ಮಂಡ್ಯ ಸಂಸದೆ ಸುಮಲತಾ ಮನವಿಯನ್ನು ಕೇಂದ್ರ ರೈಲ್ವೇ ಸಚಿವಾಲಯ ಪುರಸ್ಕರಿಸಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್​​ ಗೋಯಲ್ ಸಂಸದರ ಮೊದಲ ಮನವಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಪರಿಣಾಮ ಮೆಮೊ ರೈಲಿನಲ್ಲಿ ಮಹಿಳಾ ಬೋಗಿಗೆ ಚಾಲನೆ ಸಿಗಲಿದೆ.

ಸುಮಲತಾ ಅಂಬರೀಶ್ ನಾಳೆ 11 ಗಂಟೆಗೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಮೆಮೊ ರೈಲಿನ ಮಹಿಳಾ ಬೋಗಿಗಳಿಗೆ ಚಾಲನೆ ನೀಡಲಿದ್ದು ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಂಬರೀಶ್ ಮಹಿಳಾ ನೌಕರರ ದೃಷ್ಟಿಯಿಂದ ರೈಲುಗಳಿಗೆ ಮಹಿಳಾ ಬೋಗಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ABOUT THE AUTHOR

...view details