ಕರ್ನಾಟಕ

karnataka

ETV Bharat / state

ಮಠದ ಸ್ವಾಮೀಜಿಗಳು ರಾಜಕೀಯ ಮಾಡಬಾರದು: ಹೆಚ್​​ಡಿಕೆ - Mandya

ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮಠಮಾನ್ಯಗಳ ರಕ್ಷಣೆ ಪಡೆಯಲು ಹೋಗಲ್ಲ. ಅಧಿಕಾರ ಬಂದಾಗ ಕೆಲಸ ಮಾಡಿದ್ದೇವೆ, ಬೇಡ ಅಂದಾಗ ಹೊರಗೆ ಬಂದಿದ್ದೇವೆ-ಹೆಚ್​​.ಡಿ.ಕುಮಾರಸ್ವಾಮಿ

HD Kumaraswamy
ಹೆಚ್​​.ಡಿ ಕುಮಾರಸ್ವಾಮಿ

By

Published : Jun 18, 2021, 1:11 PM IST

ಮಂಡ್ಯ: ಮಠದ ಸ್ವಾಮೀಜಿಗಳು ರಾಜಕೀಯ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಹೇಳಿದರು.

ಹೆಚ್​​.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯ ಮುಖ್ಯ. ವ್ಯಕ್ತಿ ಮುಖ್ಯ ಅಲ್ಲ. ಈಗ ಕೆಲವು ಮಠಾಧೀಶರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರು ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಇಲ್ಲಿ ಜಾತಿ ಮುಖ್ಯ ಅಲ್ಲ. ಬಡತನ, ಸಾವು ಯಾವುದೋ ಒಂದು ಜಾತಿಯಲ್ಲಿ ಆಗಿಲ್ಲ. ಎಲ್ಲಾ ಜಾತಿಯ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಲು ಉಪಯೋಗವಾಗುವ ಮಾತುಗಳನ್ನಾಡಬೇಕು ಎಂದು ಸಲಹೆ ನೀಡಿದರು.

ನನ್ನನ್ನು ಅಧಿಕಾರದಿಂದ ತೆಗೆದರು. ನಮ್ಮ ಒಕ್ಕಲಿಗ ಸಮಾಜದ ಸ್ವಾಮಿಗಳು ರಕ್ಷಣೆಗೆ ಬಂದ್ರಾ?. ನಮ್ಮಲ್ಲಿ ದೊಡ್ಡತನ ಇಟ್ಟುಕೊಂಡಿದ್ದೇವೆ. ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮಠಮಾನ್ಯಗಳ ರಕ್ಷಣೆ ಪಡೆಯಲು ಹೋಗಲ್ಲ. ಅಧಿಕಾರ ಬಂದಾಗ ಕೆಲಸ ಮಾಡಿದ್ದೇವೆ. ಬೇಡ ಎಂದಾಗ ಹೊರಗೆ ಬಂದಿದ್ದೇವೆ ಎಂದರು.

ಸ್ವಾಮೀಜಿಗಳು ಈ ರೀತಿಯ ಹೇಳಿಕೆ ನೀಡುವುದು ರಾಜ್ಯಕ್ಕೆ ಎಲ್ಲೋ ಒಂದು ಕಡೆ ತಾವುಗಳೇ ಒಂದು ಕೆಟ್ಟ ಸಂಸ್ಕೃತಿ ಹುಟ್ಟುಹಾಕುತ್ತಿದ್ದೀರಿ ಎಂಬುವುದನ್ನ ಮರೆಯಬೇಡಿ. ಇಂದು ನಮ್ಮ ಜವಾಬ್ದಾರಿ ಇರುವುದು ವ್ಯಕ್ತಿ ಮುಖ್ಯ ಅಲ್ಲ. ನಾಡಿನ ಜನರ ಬದುಕು ಮುಖ್ಯ. ಇದರ ಕಡೆ ಎಲ್ಲರ ಗಮನ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಓದಿ:ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ : ಹೆಚ್​ಡಿಕೆ

ABOUT THE AUTHOR

...view details