ಮಂಡ್ಯ: ಸಚಿವ ಖಾತೆ ಬದಲಾವಣೆ ಹಿನ್ನೆಲೆ ನಾರಾಯಣಗೌಡರ ಬೆಂಬಲಿಗರು ಸಭೆ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ.
ನಾರಾಯಣಗೌಡ ಖಾತೆ ಬದಲಾವಣೆಗೆ ಬೆಂಬಲಿಗರ ಅಸಮಾಧಾನ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ನಾರಾಯಣಗೌಡ ಬೆಂಬಲಿಗರು, ನಾಳೆ ಸಿಎಂ ಬಿಎಸ್‌ವೈ ಭೇಟಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಹಳೆ ಖಾತೆಯನ್ನೇ ಮುಂದುವರೆಸುವಂತೆ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿ ಮಾಡುವುದಾಗಿ ಬೆಂಬಲಿಗರು ತಿಳಿಸಿದರು.
ಓದಿ-ನಡೆದಾಡುವ ದೇವರ ಎರಡನೇ ವರ್ಷದ ಪುಣ್ಯಸ್ಮರಣೆ : ಸಿದ್ಧಗಂಗೆಯಲ್ಲಿ ಮೊಳಗಿದ ಓಂಕಾರ
ಹಿಂದೆ ನೀಡಿದ್ದ ಖಾತೆಗಳು ಪಕ್ಷ ಸಂಘಟನೆಗೆ ಸಹಕಾರಿಯಾಗಿದ್ದವು. ಹೀಗಾಗಿ ಗ್ರಾ.ಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಆದ್ರೆ ಈಗ ನೀಡಿರುವ ಯುವಜನಸೇವೆ, ಹಜ್ ಖಾತೆಯಿಂದ ಸಂಘಟನೆ ಕಷ್ಟ ಸಾಧ್ಯವಾಗಿದೆ. ಮುಂಬರುವ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ದೃಷ್ಟಿಯಿಂದ ಹಳೇ ಖಾತೆಗಳನ್ನು ಮುಂದುವರೆಸುವಂತೆ ಒತ್ತಾಯ ಮಾಡುವುದಾಗಿ ಮಾಹಿತಿ ನೀಡಿದರು.