ಮಂಡ್ಯ:ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ನಲ್ಲಿ ನಡೆದಿದೆ ಎನ್ನಲಾದ ಹಾಲು ಕಲಬೆರಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಒತ್ತಡಕ್ಕೆ ಮಣಿದು ಸೂಪರ್ ಸೀಡ್ ಮಾಡಬಾರದೇಕೆ? ಎಂದು ಮನ್‌ಮುಲ್ ಆಡಳಿತ ಮಂಡಳಿಗೆ ಸಹಕಾರ ಸಂಘದ ಹೆಚ್ಚುವರಿ ನಿಬಂಧಕರ ಮೂಲಕ ರಾಜ್ಯ ಸರ್ಕಾರ 30(2) (ಐವಿ) ಅನ್ವಯ ನೋಟಿಸ್ ನೀಡಿತ್ತು.
ಅಲ್ಲದೇ, ಆಡಳಿತ ಮಂಡಳಿ ಸ್ಟೇ (ಯಥಾಸ್ಥಿತಿ ಆದೇಶ) ತರಬಹುದೆಂಬ ಕಾರಣಕ್ಕೆ ಕೇವಿಯಟ್ ಕೂಡ ಸಲ್ಲಿಸಿತ್ತು. ಆದರೆ, ನೋಟಿಸ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ, ಉಚ್ಚ ನ್ಯಾಯಾಲಯದ ಮೂಲಕ ಸ್ಟೇ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಡಳಿತ ಮಂಡಳಿ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.