ಮಂಡ್ಯ: ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಮೇ 13ರಂದು 41ನೇ ವಸಂತಕ್ಕೆ ಕಾಲಿಟ್ಟರು. ನೆಚ್ಚಿನ ನಟಿಯ ಬರ್ತ್ಡೇಯನ್ನು ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಸನ್ನಿ ಲಿಯೋನ್ ಅಭಿಮಾನಿ ಬಳಗ ರಕ್ತದಾನ ಶಿಬಿರ, ಬಾಡೂಟ ಆಯೋಜಿಸಿ ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವಿಷ್ಯ ತಿಳಿದ ಸನ್ನಿ ಮಂಡ್ಯ ಹುಡುಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಜನ್ಮದಿನಕ್ಕೆ ರಕ್ತದಾನ, ಬಾಡೂಟ: ಮಂಡ್ಯ ಬಾಯ್ಸ್ ಪ್ರೀತಿಗೆ ಮನಸೋತ ನಟಿ - ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಆಚರಿಸಿದ ಮಂಡ್ಯ ಅಭಿಮಾನಿಗಳು
ಮೇ 13ರಂದು ಸನ್ನಿ ಲಿಯೋನ್ಗೆ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟಿಯ ಅಭಿಮಾನಿಗಳ ಬಳಗ ಮಂಡ್ಯದಲ್ಲಿ ರಕ್ತದಾನ, ಬಾಡೂಟ ಏರ್ಪಡಿಸಿದ್ದರು. ಈ ಸುದ್ದಿ ತಿಳಿದ ಸನ್ನಿ, ಮಂಡ್ಯ ಹುಡುಗರ ಪ್ರೀತಿಗೆ ಮನಸೋತು ಟ್ವೀಟಿಸಿದ್ದಾರೆ.
ಮಂಡ್ಯ ಹುಡುಗರ ಪ್ರೀತಿಗೆ ಮನಸೋತ ನಟಿ
ಇದನ್ನೂ ಓದಿ:ಮಂಡ್ಯದಲ್ಲಿ ಸನ್ನಿ ಹುಟ್ಟುಹಬ್ಬ.. ರಕ್ತದಾನ ಶಿಬಿರ, ಭರ್ಜರಿ ಬಾಡೂಟ ಹಂಚಿದ ಅಭಿಮಾನಿಗಳು!
ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಸುದ್ದಿ ಶೇರ್ ಮಾಡಿರುವ ನಟಿ, 'ಓ ಮೈ ಗಾಡ್, ನನ್ನಿಂದ ಇದನ್ನು ನಂಬಲಾಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನೂ ಕೂಡ ರಕ್ತದಾನ ಮಾಡುವೆ. ತುಂಬು ಹೃದಯದ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.