ಮಂಡ್ಯ: ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಸುಮಲತಾ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈಗ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಸುಮಲತಾ - ಮಠಗಳಿಗೆ ಭೇಟಿ
ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಸುಮಲತಾ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈಗ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಳವಳ್ಳಿ ತಾಲೂಕಿನ ಬಿಜಿಪುರದ ಧರೆಗೆ ದೊಡ್ಡವರು ಮಂಟೇಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿದ ಸುಮಲತಾ ಮತ್ತು ಅಭಿಷೇಕ್, ನಂತರ ಮಂಟೇಸ್ವಾಮಿ ಮಠದ ಸ್ವಾಮೀಜಿ ಸಂಜಯ್ ರಾಜೇ ಅರಸು ಜೊತೆ ಮಾತುಕತೆ ನಡೆಸಿದರು. ಸುಮಾರು 20 ನಿಮಿಷಗಳ ಕಾಲ ಸ್ವಾಮೀಜಿ ಜೊತೆ ಮಾತುಕತೆ ಮಾಡಿದ ಸುಮಲತಾ ಮತ್ತು ಅಭಿಷೇಕ್ ಆಶೀರ್ವಾದ ಪಡೆದರು.
ಸ್ವಾಮೀಜಿಗಳ ಆಶೀರ್ವಾದ ನಂತರ ಹೊರ ಮಠಕ್ಕೂ ಭೇಟಿ ನೀಡಿ, ಚಂದ್ರಶೇಖರ ಸ್ವಾಮೀಜಿಯ ಆಶೀರ್ವಾದ ಪಡೆದರು. ಬಳಿಕ ಮಠದಲ್ಲಿ ಹೋಳಿಗೆ ಊಟ ಸವಿದು, ಪ್ರಚಾರಕ್ಕೆ ತೆರಳಿದರು.ಮಠಗಳ ಭೇಟಿ ನಂತರ ಮಳವಳ್ಳಿ ಪಟ್ಟಣಕ್ಕೆ ಭೇಟಿ ನೀಡಿದ ಇಬ್ಬರಿಗೂ ಅಭಿಮಾನಿಗಳು ಕ್ರೇನ್ ಮೂಲಕ ಭಾರೀ ಹಾರವನ್ನು ಹಾಕಿ ಸಂಭ್ರಮದಿಂದ ಸ್ವಾಗತ ಕೋರಿದರು. ಸಾವಿರಾರು ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಆಶೀರ್ವಾದ ಕೋರಿದರು. ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದರು.