ಮಂಡ್ಯ: ತಾಕತ್ ಇದ್ರೆ ಪುಟ್ಟರಾಜು ಅವರು ನುಡಿದಂತೆ ನಡೆಯಲಿ ನನ್ನ ಹೆಸರು ಬಳಸಿಕೊಂಡು ಪುಟ್ಟರಾಜು ಮೈಲೇಜ್ ತಗೊಳ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಶಾಸಕ ಪುಟ್ಟರಾಜು ವಿರುದ್ಧ ಕಿಡಿಕಾರಿದ್ದಾರೆ. ಧಮ್, ತಾಕತ್ ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎಂದು ಸಂಸದೆ ಸುಮಲತಾ ಹೇಳಲಿ ಎಂಬ ಶಾಸಕ ಪುಟ್ಟರಾಜು ಹೇಳಿಕೆ ವಿಚಾರವಾಗಿ ಮದ್ದೂರಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ತಾಕತ್ತು ಬಗ್ಗೆ ಮಾತನಾಡೋಕೆ ಹೋದರೆ ಹಳೆಯ ಮಾತನ್ನ ನೆನೆಪು ಮಾಡಿಕೊಳ್ಳಬೇಕಾಗುತ್ತೆ. ಚುನಾವಣೆ ಸಮಯದಲ್ಲಿ ನಮ್ಮ ಅಭ್ಯರ್ಥಿ ಎರಡೂವರೆ ಲಕ್ಷ ಲೀಡ್ ನಲ್ಲಿ ಗೆಲ್ಲದೇ ಇದ್ದಲ್ಲಿ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪುಟ್ಟರಾಜು ಹೇಳಿದ್ದರು. ತಾಕತ್ ಇದ್ದರೆ ಮೊದಲು ನುಡಿದಂತೆ ಮಾಡಲಿ ಅಮೇಲೆ ನಮ್ಮ ಬಗ್ಗೆ ಮಾತನಾಡಲು ಬರಲಿ ಎಂದು ಚಾಟಿ ಬೀಸಿದರು.
ಚುನಾವಣೆಗೆ ಶಾಸಕ ಪುಟ್ಟರಾಜು ಅವರಿಗೆ ಪಬ್ಲಿಸಿಟಿ ಬೇಕು - ಸುಮಲತಾ:ಚುನಾವಣೆ ಹತ್ತಿರ ಬರ್ತಿದೆ ಪುಟ್ಟರಾಜು ಅವರಿಗೆ ಪಬ್ಲಿಸಿಟಿ ಬೇಕು. ನನ್ನ ಹೆಸರು ಬಳಸಿಕೊಂಡು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಾನು ಗಣಿಗಾರಿಕೆಯಿಂದ ಬರುತ್ತಿದ್ದ ರಾಜಧನವನ್ನ ವಂಚಿಸಿದವರು ಅಂತ ಹೇಳಿದ್ದೇ ಹೊರತು ಅವರ ಹೆಸರು ಪ್ರಸ್ತಾಪಿಸಿದ್ದನಾ? ಅದ್ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೊಡ್ಕೊಳೋದು ಏಕೆ ಎಂದು ಪ್ರಶ್ನಿಸಿದರು. ರಾಜಧನ ವಂಚಿಸುತ್ತಿರುವವರು ಹಲವರು ಇದ್ದಾರೆ. ಈ ಬಗ್ಗೆ ಅವರಿಗೆ ನಾನು ಏಕೆ ಪ್ರೂಫ್ ಕೊಡಬೇಕು? ಗಣಿ ಇಲಾಖೆಯಿಂದ ಮಾಹಿತಿ ತೆಗೆದುಕೊಳ್ಳಲಿ, ಹೇಗಿದ್ದರು ಅವರು ಶಾಸಕರು ತಾನೇ ಎಂದು ಸುಮಲತಾ ಪ್ರಶ್ನಿಸಿದರು.