ಕರ್ನಾಟಕ

karnataka

ETV Bharat / state

ಸುಮಲತಾ ಪ್ರಚಾರ ಅಂತ್ಯ... ರೋಡ್​ ಶೋನಲ್ಲಿ ಮತ್ತೆ ರಾರಾಜಿಸಿದ ಕಾಂಗ್ರೆಸ್​, ಬಿಜೆಪಿ ಬಾವುಟ - undefined

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ರ‍್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.‌

ಸುಮಲತಾ

By

Published : Apr 16, 2019, 6:03 PM IST

ಮಂಡ್ಯ: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ಸ್ವಾಭಿಮಾನಿ ಸಮ್ಮಿಲನಕ್ಕೆ ಜನಸಾಗರ ಹರಿದು ಬಂದಿತ್ತು. ರ‍್ಯಾಲಿಗೂ ಮುನ್ನ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದರು.

ಸುಮಲತಾ‌ ಸಮಾವೇಶದ ರ‍್ಯಾಲಿಗೆ ವಿವಿಧ ಪಕ್ಷಗಳ ಧ್ವಜಗಳು ಮೆರಗು ನೀಡಿದವು. ರ‍್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.‌

ಪ್ರಚಾರಕ್ಕೆ ತೆರೆ ಎಳೆದ ಸುಮಲತಾ

ರೆಬಲ್ ನಾಯಕರಾದ ರಮೇಶ್ ಬಾಬು, ಚಲುವರಾಯಸ್ವಾಮಿ , ಗಣಿಗ ರವಿಕುಮಾರ್ ಭಾವಚಿತ್ರ ಹೊತ್ತು ಅಭಿಮಾನಿಗಳು ಮೆರವಣಿಗೆ ಮಾಡಿದರು. ಸುಮಾರು 1 ಕಿ.ಮೀ ಉದ್ದದ ಜನ ಸಾಗರದ ನಡುವೆ ರೋಡ್ ಶೋ ನಡೆಯಿತು. ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details