ಮಂಡ್ಯ: ನಟಿ ಸುಮಲತಾ ಅಂಬರೀಶ್ ನುಡಿದಂತೆ ನಡೆದುಕೊಂಡಿದ್ದಾರೆ. ಹುತಾತ್ಮ ಯೋಧ ಗುರು ಪತ್ನಿ ಕಲಾವತಿಗೆ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿಯ ದಾನ ಪತ್ರವನ್ನು ಇಂದು ಹಸ್ತಾಂತರಿಸಿದ್ದಾರೆ.
ನುಡಿದಂತೆ ನಡೆದ್ರು ಸುಮಲತಾ... ಹುತಾತ್ಮ ಗುರು ಕುಟುಂಬಕ್ಕೆ ಸಿಕ್ತು ಭೂದಾನ ಪತ್ರ - ಮಂಡ್ಯ
ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸುಮಲತಾ ಅಂಬರೀಶ್ ತಾವು ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಗುರು ಪತ್ನಿ ಕಲಾವತಿಗೆ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಕೃಷಿ ಭೂಮಿಯ ದಾನ ಪತ್ರವನ್ನು ನಟಿ ಸುಮಲತಾ ಹಸ್ತಾಂತರಿಸಿದ್ದಾರೆ.
ದಾನಪತ್ರ ನೀಡಿದ ಸುಮಲತಾ
ಇಂದು ಪತ್ರಕರ್ತರ ಸಮ್ಮುಖದಲ್ಲಿ ಪತ್ರ ಹಸ್ತಾಂತರ ಮಾಡಿದ ಸುಮಲತಾ, 20 ಗುಂಟೆ ಕೃಷಿ ಜಮೀನು ಇಂದಿನಿಂದ ಅವರ ಕುಟುಂಬಕ್ಕೆ ಸೇರಿದ್ದು ಎಂದು ಹೇಳಿದರು. ಅವರು ಹೇಗೆ ಬರೆಸಿಕೊಳ್ಳಲು ಇಚ್ಛೆ ಪಡುತ್ತಾರೋ ಹಾಗೆ ಬರೆದುಕೊಡಲು ಸಿದ್ಧವೆಂದು ಸ್ಪಷ್ಟಪಡಿಸಿದರು. ಕೃಷಿ ಭೂಮಿ ಯೋಧನ ಕುಟುಂಬಕ್ಕೆ ಸಹಾಯವಾಗಲಿದೆ. ಅದನ್ನು ಅವರು ಉಳಿಸಿಕೊಳ್ಳುತ್ತಾರೆ ಎಂದರು.
ಬಳಿಕ ಯೋಧನ ಪತ್ನಿ ಕಲಾವತಿ ಮಾತನಾಡಿ, ಅವರ ನಂಬಿಕೆಯನ್ನು ನಾನು ಉಳಿಸಿಕೊಳ್ಳುವೆ. ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಸುಮಲತಾ ಅವರಿಗೆ ಮಾತು ನೀಡಿದರು.