ಮಂಡ್ಯ:ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ನಾಗಮಂಗಲ ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಪ್ರಚಾರ - ಭರ್ಜರಿ ಪ್ರಚಾರ
ನಾಗಮಂಗಲ ಗಡಿ ಭಾಗವಾದ ಚೀಣ್ಯಾದಿಂದ ಪ್ರಚಾರ ಆರಂಭ ಮಾಡಿ ಬ್ರಹ್ಮ ದೇವರಹಳ್ಳಿ, ಹೊಣಕೆರೆ, ನಾಗಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದಾರೆ.
ಸುಮಲತಾ
ನಾಗಮಂಗಲ ಗಡಿ ಭಾಗವಾದ ಚೀಣ್ಯಾದಿಂದ ಪ್ರಚಾರ ಆರಂಭ ಮಾಡಿ ಬ್ರಹ್ಮ ದೇವರಹಳ್ಳಿ, ಹೊಣಕೆರೆ, ನಾಗಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ದರ್ಶನ್ ಈ ಭಾಗದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಕೈಗೊಂಡಿದ್ದರು. ಈಗ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದಾರೆ.
ಪ್ರತಿಯೊಂದು ಗ್ರಾಮಗಳಲ್ಲೂ ಭರ್ಜರಿ ಸ್ವಾಗತ ದೊರಕುತ್ತಿದ್ದು, ಮತ ಯಂತ್ರದಲ್ಲಿನ ಕ್ರಮ ಸಂಖ್ಯೆ ಹಾಗೂ ಗುರುತಿನ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.