ಮಂಡ್ಯ:ಅಂಬಿ ಹುಟ್ಟೂರು ದೊಡ್ಡರಸಿನ ಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಪ್ರಚಾರ ನಡೆಸುತ್ತಿದ್ದು, ಅಭಿಮಾನಿಗಳ ದಂಡಿನೊಂದಿಗೆ ಪ್ರಯಾಣ ಮಾಡುತ್ತಿದ್ದಾರೆ.
ಕೆ.ಎಂ.ದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ತೆರೆದ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದು, ಅಪಾರ ಬೆಂಬಲಿಗರ ಜೊತೆ ರೋಡ್ ಶೋ ಮಾಡುತ್ತಿದ್ದು, ಅಭಿಮಾನಿಗಳು ಬೆಂಬಲದ ಭರವಸೆ ನೀಡುತ್ತಿದ್ದಾರೆ.
ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ ಅಮ್ಮನ ಜೊತೆ ಪುತ್ರ ಅಭಿಷೇಕ್ ಪ್ರಚಾರ ಮಾಡುತ್ತಿದ್ದು, ಜೊತೆಯಲ್ಲೇ ನಿಂತು ಮತ ಭೇಟೆ ಆರಂಭ ಮಾಡಿದ್ದಾರೆ. ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಪ್ರಚಾರದ ನಡುವೆಯೂ ಮಾಧ್ಯಮಗಳ ಜೊತೆ ಮಾತನಾಡಿರುವ ಸುಮಲತಾ, ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಲಾಠಿ ಚಾರ್ಚ್ ಮೂಲಕ ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ನಮ್ಮ ಕಾರ್ಯಕರ್ತರಾರೂ ನಿಖಿಲ್ ಬೆಂಬಲಿಗರ ಕಾರಿನ ಮೇಲೆ ದಾಳಿ ಮಾಡಿಲ್ಲ. ಸಿಂಪತಿ ಕ್ರಿಯೆಟ್ ಮಾಡಿಕೊಳ್ಳಲು ಅವರೇ ಕ್ರಿಯೆಟ್ ಮಾಡಿರುವ ತಂತ್ರಗಾರಿಕೆ ಎಂದು ಹೇಳಿದ ಸುಮಲತಾ, ನಮ್ಮ ಕಾರ್ಯಕರ್ತರು ಅಂತಹ ಕೆಲಸ ಮಾಡಲ್ಲ, ನಾವು ಪ್ರವೋಕ್ ಮಾಡುವುದಿಲ್ಲ ಎಂದರು.