ಮಂಡ್ಯ: ಲೋಕ ಸಮರದಲ್ಲಿ ಸುಮಲತಾ ಅಂಬರೀಶ್ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದ ಅಭಿಮಾನಿಗಳು ಹರಕೆ ತೀರಿಸಲು ಮುಂದಾಗಿದ್ದು, ಅದಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾರೆ.
ಸುಮಲತಾ ಅಂಬರೀಶ್ ಗೆಲುವು ಹಿನ್ನೆಲೆ ಅಭಿಮಾನಿಗಳಿಂದ ಹರಕೆ ಸಲ್ಲಿಕೆ - kannadanews
ಲೋಕಸಭೆಯಲ್ಲಿ ಸುಮಲತಾ ಅಂಬರೀಶ್ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಸುಮಲತಾ ಗೆಲುವು ಹಿನ್ನೆಲೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದಾರೆ.
ಶ್ರೀರಂಗಪಟ್ಟಣದ ನಿಮಿಷಾಂಭ ದೇವಿಯ ದೇವಾಲಯದಿಂದ ಮಹದೇಶ್ವರ ಬೆಟ್ಟದವರೆಗೂ ಪಾದಯತ್ರೆ ಮಾಡುವುದಾಗಿ ಹರಕೆ ಹೊತ್ತಿಕೊಂಡಿದ್ದರು. ಇಂದು ಗಂಜಾಮ್ನ ನಿಮಿಷಾಂಭ ದೇವಾಲಯದಿಂದ 50ಕ್ಕೂ ಹೆಚ್ಚು ಅಭಿಮಾನಿಗಳು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.
ಬನ್ನೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮೂರು ದಿನಗಳಲ್ಲಿ ಅಭಿಮಾನಿಗಳು ಬೆಟ್ಟ ತಲುಪಲಿದ್ದಾರೆ. ನಂತರ ಮಹದೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸುಮಲತಾ ಗೆಲುವು ಸಾಧಿಸಿದ್ರೆ ಪಾದೆಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವುದಾಗಿ ಹರಿಕೆ ಹೊತ್ತಿದ್ದ ಸುಮಲತಾ ಅಭಿಮಾನಿಗಳ ಯಾತ್ರೆಗೆ ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್.ಲಿಂಗರಾಜು ಚಾಲನೆ ನೀಡಿದ್ದಾರೆ. ಸುಮಲತಾ ಬೆಂಬಲಿಗ ಮಂಜು ನೇತೃತ್ವದಲ್ಲಿ ಪಾದಯಾತ್ರೆಗೆ ತೆರಳುತ್ತಿದ್ದು, ಮೂರು ದಿನಗಳ ಕಾಲ ಯಾತ್ರೆ ನಡೆಯಲಿದೆ. ನಂತರ ಪೂಜೆ ಸಲ್ಲಿಸಿ ಶ್ರೀರಂಗಪಟ್ಟಣದ ಕಡೆ ಬರಲಿದ್ದಾರೆ.