ಮಂಡ್ಯ:ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುಮಲತಾ ಅಂಬರೀಷ್, ಸಂಸದೆಯಾಗಿ ಮೇ 23ಕ್ಕೆ ಎರಡು ವರ್ಷ ಪೂರೈಸಿದ್ದಾರೆ. ಹೀಗಾಗಿ, ತಮ್ಮ ಗೆಲುವಿನ ಕ್ಷಣವನ್ನು ನೆನೆದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ವಾಭಿಮಾನ ಎಂದರೆ ಏನು ಅನ್ನುವುದನ್ನು ಮಂಡ್ಯ ಜನತೆ ಇಡೀ ಜನತ್ತಿಗೆ ತೋರಿಸಿಕೊಟ್ಟು ಎರಡು ವರ್ಷವಾಯಿತು. ಮಂಡ್ಯ ಲೋಕಸಭೆ ಸಂಸದೆಯಾಗಿ ಆಯ್ಕೆ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟ ಮಂಡ್ಯದ ಸ್ವಾಭಿಮಾನಿ ಮತದಾರರಿಗೆ ಮತ್ತು ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಷೇತ್ರದ ಜನರಿಗಾಗಿ ಈವರೆಗೂ ನಾನು ಮಾಡಿದ ಕೆಲಸಗಳಿಗೆ ಪ್ರೋತ್ಸಾಹಿಸಿದ, ಮುಂದಿನ ಕನಸುಗಳಿವೆ ಮಾರ್ಗದರ್ಶ ಮಾಡುತ್ತಿರುವ ಹಿರಿಯರಿಗೆ, ಅಧಿಕಾರಿ ವರ್ಗಕ್ಕೆ, ಅಭಿಮಾನಿಗಳಿಗೆ ಮತ್ತು ಮಾಧ್ಯಮದ ಮಿತ್ರರಿಗೆ ಧನ್ಯವಾದಗಳು.