ಕರ್ನಾಟಕ

karnataka

ETV Bharat / state

ಚುನಾವಣಾ ಪ್ರಚಾರಕ್ಕಾಗಿ ಸುಮಲತಾ ಅಂಬರೀಶ್​ ಫೋಟೋಶೂಟ್​​ - ಸುಮಲತಾ ಅಂಬರೀಶ್

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಸುಮಲತಾ ಅಂಬರೀಶ್ ಚುನಾವಣಾ ಪ್ರಚಾರಕ್ಕೆ ಸಹಾಯವಾಗಲೆಂದು ಫೋಟೋಶೂಟ್ ನಡೆಸಿದ್ದಾರೆ. ಖಾದಿ ಸೀರೆಯುಟ್ಟು ಸುಮಲತಾ ಪೋಟೋಶೂಟ್ ಮಾಡಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.

ಸುಮಲತಾ ಅಂಬರೀಶ್​

By

Published : Mar 5, 2019, 3:36 PM IST

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಎಲ್ಲಾ ಪಾರ್ಟಿಗಳು ಭರ್ಜರಿ ಸಿದ್ಧತೆ ನಡೆಸಿವೆ. ರಾಜ್ಯದಲ್ಲೂ ಚುನಾವಣೆ ಕಾವು ದಿನೇ ದಿನೆ ಹೆಚ್ಚುತ್ತಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ.

ಸುಮಲತಾ ಅಂಬರೀಶ್​

ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಪ್ರಬಲ ಅಕಾಂಕ್ಷಿ ಸುಮಲತಾ ಅಂಬರಿಶ್ ಚುನಾವಣೆಗೆ ಜೋರಾಗಿ ತಯಾರಾಗುತ್ತಿದ್ದಾರೆ. ಖಾದಿ ಸೀರೆಯುಟ್ಟು ಸುಮಲತಾ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕೆ ಅನುಕೂಲವಾಗಲೆಂದು ಸುಮಲತಾ ಈ ಪೋಟೋಶೂಟ್ ನಡೆಸಿದ್ದಾರೆ. ಈ ಮೂಲಕ ಸುಮಲತಾ ಮಂಡ್ಯ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details