ಕರ್ನಾಟಕ

karnataka

ETV Bharat / state

ಮಹಿಳೆ ಸ್ಪರ್ಧೆ ಅಪರಾಧದಂತೆ ಬಿಂಬಿಸುತ್ತಿರುವ ಜೆಡಿಎಸ್​... ಸುಮಲತಾ ಆಕ್ರೋಶ - darshan

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ ಶುರು. ಏಪ್ರಿಲ್ 2 ರಿಂದ ದರ್ಶನ್ ಹಾಗೂ ಯಶ್ ಪ್ರಚಾರ ಶುರು. ಜೆಡಿಎಸ್ ನಾಯಕರು ಮಹಿಳೆಯ ಸ್ಪರ್ಧೆಯನ್ನು ಅಪರಾಧದಂತೆ ಬಿಂಬಿಸುತ್ತಿದ್ದಾರೆ ಎಂದು ಸುಮಲತಾ ಅಸಮಾಧಾನ.

ಸುಮಲತಾ ಅಂಬರೀಶ್

By

Published : Mar 29, 2019, 5:06 PM IST

ಮಂಡ್ಯ:ಜೆಡಿಎಸ್ ನಾಯಕರು ಮಹಿಳೆಯ ಸ್ಪರ್ಧೆಯನ್ನು ಅಪರಾಧದಂತೆ ಬಿಂಬಿಸುತ್ತಿದ್ದಾರೆ. ಅಂಬಿ ಸಮಾಧಿ, ಅಂಬಿ ಸಾವನ್ನೇ ರಾಜಕೀಯ ಮಾಡಿಕೊಂಡು ಹೇಯ ರಾಜಕೀಯ ಮಾಡುತ್ತಿದೆ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರ ಹಾಕಿದರು.

ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿ ಬಳಿ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಿರುವ ಸುಮಲತಾ ಅಂಬರೀಶ್, ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ.ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬಿ ಸಾವನ್ನೇ ರಾಜಕೀಯ ಮಾಡಿಕೊಂಡಿದ್ದಾರೆ. ಅವರದ್ದು ಹೇಯ ರಾಜಕೀಯ ಎಂದು ಅಸಮಾಧಾನ ಹೊರ ಹಾಕಿದರು.

ಡಿ ಬಾಸ್ ಅಬ್ಬರ:

ಏಪ್ರಿಲ್ 2 ರಿಂದ ದರ್ಶನ್ ಹಾಗೂ ಯಶ್ ಪ್ರಚಾರ ಶುರು ಮಾಡಲಿದ್ದಾರೆ. ಕ್ಷೇತ್ರದಲ್ಲಿ ಏಪ್ರಿಲ್ 16ರವರೆಗೂ ಜಿಲ್ಲೆಯಲ್ಲಿ ಸಂಚಾರ ಮಾಡಲಿದ್ದಾರೆ. ಪ್ರಚಾರದ ಪ್ಲಾನ್ ರೂಪಿಸಲಾಗಿದೆ.ದರ್ಶನ್, ಯಶ್, ಅಭಿಷೇಕ್, ಸುಮಲತಾ ಒಂದೊಂದು ಕಡೆ ಪ್ರಚಾರ ಮಾಡಲಿದ್ದಾರೆ‌. ಚುನಾವಣೆ ಅಂತಿಮ ದಿನದವರೆಗೂ ಸಂಚಾರ ಮಾಡಲಿದ್ದಾರೆ.

ABOUT THE AUTHOR

...view details