ಮಂಡ್ಯ: ಕೇಂದ್ರ ಬಜೆಟ್‌ಗೂ ಮೊದಲು ಸಂಸದೆ ಸುಮಲತಾ ಅಂಬರೀಶ್ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿಯಾಗಿ ತಮ್ಮ ಮೊದಲ ಬೇಡಿಕೆ ಸಲ್ಲಿಸಿದ್ದಾರೆ.
ರೈಲ್ವೆ ಸಚಿವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದೆ ಸುಮಲತಾ - undefined
ಬೆಂಗಳೂರು-ಮೈಸೂರು ನಡುವೆ ಓಡಾಡುವ ರೈಲುಗಳಿಗೆ ಹೆಚ್ಚುವರಿ ಮಹಿಳಾ ಬೋಗಿ ಸೇರಿಸುವಂತೆ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದ ಸಂಸದೆ ಸುಮಲತಾ ಅಂಬರೀಶ್.

ಸುಮಲತಾ ಅಂಬರೀಶ್ ರೈಲ್ವೆ ಸಚಿವ ಪಿಯುಷ್ ಗೋಯಲ್ ಭೇಟಿ
ಸಚಿವ ಗೋಯಲ್ ಹಾಗೂ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಬೆಂಗಳೂರು-ಮೈಸೂರು ನಡುವೆ ಓಡಾಡುವ ರೈಲುಗಳಿಗೆ ಹೆಚ್ಚುವರಿ ಮಹಿಳಾ ಬೋಗಿ ಸೇರಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಮುಂಬೈ ಮಾದರಿಯಲ್ಲಿ ಮಹಿಳಾ ಬೋಗಿಗಳನ್ನು ಅಳವಡಿಸಿ ಅದಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕು. ಕೆ.ಆರ್. ನಗರದಲ್ಲಿ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಶೀಘ್ರವಾಗಿ ರೈಲ್ವೆ ಕಾಲೇಜ್ ಪ್ರಾರಂಭ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.